ಕುಂದಾಪುರ ಎಂಐಟಿ ಯಲ್ಲಿ ಪ್ರಥಮ ವರ್ಷದ ಎಂ ಬಿ ಎ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಬ್ರಹ್ಮಾಸ್ ಇಂಜಿನಿಯರಿಂಗ್ ಮತ್ತು ಕನ್ಸ್ಟ್ರಕ್ಷನ್ಸ್ ಕಂಪನಿ ಲಿಮಿಟೆಡ್ನ ಮ್ಯಾನುಫ್ಯಾಕ್ಚರಿಂಗ್ ನಿರ್ದೇಶಕರಾದ ಶ್ರೀಮತಿ ಆತ್ಮಿಕಾ ಅಮೀನ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಬದಲಾಗುತ್ತಿರುವ ಉದ್ಯಮದ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಸಲಹೆ ನೀಡಿದರು. ಯಾವುದೇ ಸಮಯದಲ್ಲಿ ಸ್ಪರ್ಧಾತ್ಮಕವಾಗಿರಲು ನಿರಂತರ ಕಲಿಕೆಯು ಮುಖ್ಯ ಎಂದರು. ಅವರು ತಮ್ಮದೇ ಆದ ಉದಾಹರಣೆಯನ್ನು ನೀಡುತ್ತಾ ಯಶಸ್ವಿ ಉದ್ಯಮಿಗಳಾಗಲು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು. ಮೂಡ್ಲಕಟ್ಟೆಯಲ್ಲಿ ಸ್ನಾತಕೋತ್ತರ ಪದವಿ ಮಾಡಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿರುವ ಆಡಳಿತ ಮಂಡಳಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ವಿದ್ಯಾರ್ಥಿಗಳು ವಿಭಾಗ ಹಾಗೂ ಸಂಸ್ಥೆ ನೀಡುವ ವಿವಿಧ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ವೇದಿಕೆಯಲ್ಲಿ ಐಎಂಜೆ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಎಂಐಟಿಕೆ ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ, ಡೀನ್ ಪ್ಲೇಸ್ಮೆಂಟ್, ಪ್ರೊ.ಅಮೃತಮಲಾ ಉಪಸ್ಥಿತರಿದ್ದರು. ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಮುತ್ತುಕುಮಾರ್ ಸ್ವಾಗತಿಸಿದರು, ಶ್ರೀಮತಿ ಕಾವ್ಯ ಮುಖ್ಯ ಅತಿಥಿಯನ್ನು ಪರಿಚಯಿಸಿದರು, ಪ್ರೊ.ತಿಲಕಲಕ್ಷ್ಮಿ ವಂದಿಸಿದರು. ಶ್ರೀಮತಿ ಸುಸ್ಮಿತಾ ಶೇಖರ್ ನಿರ್ವಹಿಸಿದರು.
Induction program for first year MBA students at Kundapur MIT
Inauguration of Induction programme for the first year MBA students was held recently at MIT Kundapura. Mrs. Athmika Amin, Director Manufacturing , Brahamas Engineering and Constructions Company Ltd. was the Chief Guest for the programme. While speaking on the occasion she advised the students to do hard work and adapt to changing industry scenarios. Life long learning is the key to be competitive at any point of time. She also gave tips to the students to become successful entrepreneurs citing her own example. She expressed her appreciation for the efforts of the management for providing wonderful opportunity for the students to do the post graduation at Moodlakatte. Speaking on the occasion, Principal, Dr Abdul Kareem advised the students to take the advantage of various opportunities provided by the Department and the Institution. Director Brand building IMJ Institutions Dr. Ramakrishna Hegde, Vice Principal, MITK Prof Melwin D’Souza, Dean Placement, Prof. Amruthmala were present on the stage. Dr.Muttukumar, HOD Dept of MBA welcomed the gathering, Ms Kavya introduced the Chief Guest, Prof Tilakalaxmi proposed the vote of thanks. Ms Susmita Shekhar was the Master of Ceremony.