ಕುಂದಾಪುರ: ಐಇಇಇ ವಿದ್ಯಾರ್ಥಿಗಳ ಶಾಖೆ ಎಂಐಟಿ ಕುಂದಾಪುರವು ಗೇಟ್ ಮತ್ತು ಐಇಎಸ್ ಪರೀಕ್ಷೆಗಳ ಕುರಿತು ತಜ್ಞರ ಭಾಷಣವನ್ನು ಆಯೋಜಿಸಿತ್ತು. ಎನ್‌ಎಂಎಂಐಟಿ ನಿಟ್ಟೆಯ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಮತ್ತು ಪಿಜಿ ಸಂಯೋಜಕರಾದ ಡಾ.ರಾಜಲಕ್ಷ್ಮಿ ಸಾಮಗ ಬಿ ಎಲ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಗೇಟ್ ಮತ್ತು ಐಇಎಸ್ ಪರೀಕ್ಷೆಗಳಿಗೆ ಬೇಕಾದ ತಯಾರಿ ಮತ್ತು, ಮೌಲ್ಯಮಾಪನ ಮಾದರಿ ಮತ್ತು ಪರೀಕ್ಷೆಗಳನ್ನು ಪಾಸಾಗುವ ಅಭ್ಯರ್ಥಿಗಳಿಗೆ ಲಭ್ಯವಿರುವ ವಿಶಾಲ ವ್ಯಾಪ್ತಿಯ ಅವಾಕಾಶಗಳ ಬಗ್ಗೆ ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿ’ಸೋಜಾ, ಬಿ.ಬಿ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಐಇಇಇ ಸಂಯೋಜಕ ಪ್ರೊ.ವರುಣ್ ಕುಮಾರ್ ಮತ್ತು ಪ್ರೊ.ಬಾಲನಾಗೇಶ್ವರ್ ಪ್ರೊ. ಸೂಕ್ಷ್ಮ ಎಸ್ ಅಡಿಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವನಿತಾ ವಾಸ್ ಕಾರ್ಯಕ್ರಮ ನಿರುಪಿಸಿದರು.