

ಕುಂದಾಪುರ, ಫೆ.12;ಸ್ಥಳೀಯ ರೋಜರಿ ಮಾತಾ ಚರ್ಚಿನಲ್ಲಿ ಸುವಾರ್ತ ಪ್ರಸಾರ ಆಯೋಗದವರ ಮುಂದಾಳತ್ವದಲ್ಲಿ ಫೆ.9 ರಂದು ಮಿಷನರಿ ಮೇಳದ ಮಕ್ಕಳ ಜುಬಲಿ ಉತ್ಸವ ನೆಡೆಯಿತು. ಮಕ್ಕಳು ಸಕ್ರೀಯವಾಗಿ ಬಲಿಪೂಜೆಯಲ್ಲಿ ಪಾಲ್ಗೊಂಡು ಅರ್ಥಪೂರ್ಣವಾಗಿ ನೆರವೇರಿಸಿದರು. ತದನಂತರ ದೇವಾಲಯದ ಸಭಾಂಗಣದಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ವಿಧಿಯನ್ನು ಸಂತ ಜೋಸೆಫರ ಕಾನ್ವೆಂಟಿನ ವಂದನೀಯ ಸುಪ್ರಿಯಾ ಎ.ಸಿ. ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕುಂದಾಪುರ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಅತೀ ವಂದನಿಯ ಗುರು ಪೌಲ್ ರೇಗೋರವರು – ಮಿಷನರಿ ಮಕ್ಕಳ ಧ್ಯೇಯ ವಾಕ್ಯದ ಬಗ್ಗೆ ಹೆಚ್ಚಿನ ಅರಿವನ್ನು ನೀಡಿದರು. ಮಿಷನರಿ ಮೇಳದ ಉಸ್ತುವಾರಿ ವಹಿಸಿಕೊಂಡಿರುವ ವಂ।ಜೂಲಿಯೆಟ್ ಎ.ಸಿ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚರ್ಚಿನ 20 ಆಯೋಗದ ಸಂಯೋಜಕರಾದ ಪ್ರೇಮಾ ಡಿಕುನ್ಹಾ, ಸೈಂಟ್ ಜೋಸೆಫ್ ಕಾನ್ವೆಂಟಿನ ಧರ್ಮ ಭಗಿನಿಯರು ಹಾಗೂ ಶಿಕ್ಷಕರು ಹಾಜರಿದ್ದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.
ಡೆನಿಸನ್ ಪ್ಯಾಟ್ರಿಕ್ ಬ್ರಗಾಂಜ ಸ್ವಾಗತಿಸಿ, ವಿನಿಷಾ ಡಿ’ಸೋಜರವರು ಧನ್ಯವಾದ ಸಮರ್ಪಿಸಿದರು.








