ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನೆಲದಲ್ಲಿ ಹೂತಿಟ್ಟಿದ್ದ 28 ವರ್ಷದ ಖಾಸಗಿ ಶಾಲೆಯ ಶಿಕ್ಷಕಿಯ ಶವ ನಿನ್ನೆ ಸೋಮವಾರ ಪೊಲೀಸರಿಗೆ ಪತ್ತೆಯಾಗಿದೆ. ಮೇಲುಕೋಟೆಯ ಮಾಣಿಕ್ಯನಹಳ್ಳಿ ಗ್ರಾಮದ ನಿವಾಸಿ ಹಾಗೂ ದೇವಸ್ಥಾನ ಪೇಟೆಯ ಎಸ್ಇಟಿ ಪಬ್ಲಿಕ್ ಸ್ಕೂಲ್ನಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪಿಕಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕಿ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದು, ದಂಪತಿಗೆ ಎಂಟು ತಿಂಗಳ ಮಗುವಿದೆ. ಪ್ರತಿನಿತ್ಯ ದೀಪಿಕಾ ತನ್ನ ಸ್ಕೂಟರ್ನಲ್ಲಿ ಶಾಲೆಗೆ ಹೋಗುತ್ತಿದ್ದರು. ಜನವರಿ 20ರಂದು ಕರ್ತವ್ಯ ಮುಗಿಸಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಲೆ ಬಿಟ್ಟಿದ್ದರು.
ಕೊಲೆಯಾಗಿರುವ ದೀಪಿಕಾ ಅವರು ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 20ರಂದು ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ಶಿಕ್ಷಕಿ ಸಂಜೆಯಾದರೂ ಮನೆಗೆ ಬಂದಿಲ್ಲ. ಇದರಿಂದ ಆತಂಕದಲ್ಲಿದ್ದ ಪೋಷಕರು, ತಂದೆ ವೆಂಕಟೇಶ್ ಮಗಳು ನಾಪತ್ತೆ ಆಗಿದ್ದಾಳೆ ಅಂತ ದೂರು ನೀಡಿದ್ದಾರೆ. ದೂರು ನೀಡಿದ ಮೇಲೆ ಹುಡುಕಾಡಿದಾಗ ದೀಪಿಕಾ ಬಳಸುತ್ತಿದ್ದ ಡಿಯೋ ಸ್ಕೂಟರ್ ಪತ್ತೆಯಾಗಿದೆ.
ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದ ಸ್ಫೋಟಕ ಸಂಗತಿಗಳು ಬಯಲಾಗಿವೆ.ನಿತೀಶ್ ಎಂಬುವನು ಮೇಲೆ ಸಂಶಯಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಯತೀಶ್ ಅವರು ಭೇಟಿ ನೀಡಿದ್ದು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಶಿಕ್ಷಕಿಯನ್ನು ಕೊಲೆಗೈದ ಹಂತಕರು ಬೆಟ್ಟದ ತಪ್ಪಲಲ್ಲಿ ಹೂತಿಟ್ಟು ಪರಾರಿಯಾಗಿದ್ದಾರೆ. ಕಳೆದ ಜನವರಿ 20ರಂದೇ ಪಾಂಡವಪುರ ತಾ. ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ ಅವರ ಕೊಲೆಯಾಗಿದೆ. ಮಗಳು ನಾಪತ್ತೆಯಾಗಿದ್ದಾಳೆ ಅಂತ ತಂದೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೂರು ದಿನದ ಬಳಿಕ ಬೆಟ್ಟದ ತಪ್ಪಲಿನಲ್ಲೇ ದೀಪಿಕಾ ಮೃತದೇಹ ಪತ್ತೆಯಾಗಿದ್ದು, ನಿತೀಶ್ ಎನ್ನುವ ಯುವಕನ ಮೇಲೆ ಪೋಷಕರು ಕೊಲೆ ಮಾಡಿರೋ ಆರೋಪ ಮಾಡಿದ್ದಾರೆ.
ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಮೃತದೇಹದ ವಾಸನಗೆ ಹದ್ದು, ಕಾಗೆ ಹಾರಾಡುತ್ತಾ ಇದ್ದು, ಸ್ಥಳೀಯರಿಗೆ ಸಂಶಯ ಮೂಡಿತ್ತು. ಅನುಮಾನ ಬಂದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ದೀಪಿಕಾ ಕೊಲೆಯಾಗಿದ್ದು ಪತ್ತೆಯಾಗಿದೆ. ದೀಪಿಕಾಳನ್ನು ಕೊಲೆಗೈದ ದುಷ್ಕರ್ಮಿಗಳು ಬೆಟ್ಟದ ತಪ್ಪಲಲ್ಲಿ ಹೂತಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ರೀಲ್ಸ್ ಮತ್ತು ಆ್ಯಕ್ಟಿವ್ ಆಗಿದ್ದ ಶಿಕ್ಷಕಿ ದೀಪಿಕಾ ಅವರ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಹಾಗೂ ನಿತೀಶ್ ಜಗಳವಾಡ್ತಿದ್ದ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದೆ.