ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಸ್ಪರ್ಧೆ ; ಭಾರತದಿಂದ ಉದ್ಯಾವರದ ಆ್ಯಡ್ಲಿನ್ ಕ್ಯಾಸ್ತಲಿನೊ ಪ್ರತಿನಿಧಿ

JANANUDI.COM NETWORK


ಉಡುಪಿ, ಏ.12: ಮುಂಬಯಲ್ಲಿ ನಡೆದ 2020 ರ ಸಾಲಿನ ಪ್ರತಿಷ್ಠಿತ ಮಿಸ್ ದಿವಾ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ ದಿವಾ ಯುನಿವರ್ಸ್ ಪ್ರಶಸ್ತಿಯ ಕೀರಿಟವನ್ನು ಪಡೆದುಕೊಂಡ ಉದ್ಯಾವರದ ಆ್ಯಡ್ಲಿನ್ ಕ್ಯಾಸ್ತಲಿನೊ ಇವರು ಮುಂದೆ ನಡೆಯಲಿರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಸ್ಪರ್ಧೆಗೆ ಭಾರತದ ಪರವಾಗಿ ಸ್ಪರ್ಧಿಯಾಗಿ ಪ್ರತಿನಿಧಿಸಲಿದ್ದಾಳೆ.
ಇವರು ಮೂಲತ ಕರ್ನಾಟಕದ ಉಡುಪಿ ಉದ್ಯಾವರದ ಕೊಂರಗ್ರಪಾಡಿಯವಳಾಗಿದ್ದು, ಇವರು ತಂದೆ ಆಲ್ಫೊನ್ಸ್ ಕ್ಯಾಸ್ತಲಿನೊ ಕುವೈಟ್‍ನಲ್ಲಿ ವೈಟ್ ಸ್ಟೋರ್ ನಲ್ಲಿ ಕಾರ್ಯಪ್ರವತ್ತರಾಗಿರುವ ಮತ್ತು ಕುವೈಟ್ ನ ಹೆಲ್ಮೆನ್ ವಲ್ರ್ಡ್ ವೈಡ್ ಲಾಜಿಸ್ಟಿಕ್ ನಲ್ಲಿ ಕಾರ್ಯಪ್ರವತ್ತರಾಗಿರುವ ಮೀರಾ ಕ್ಯಾಸಲಿನೊ ದಂಪತಿಯ ಪುತ್ರಿಯಾಗಿದ್ದಾರೆ. ಆ್ಯಡ್ಲಿನ್ ಕ್ಯಾಸ್ತಲಿನೊ ಕುವೈಟ್ ನಲ್ಲಿ ಜನಿಸಿದವರಾಗಿದ್ದಾರೆ. ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಸ್ಪರ್ಧೆಗೆ ಭಾರತದ ಪರವಾಗಿ ಸ್ಪರ್ಧಿಯಾಗಿ ಪ್ರತಿನಿಧಿಸಲಿರುವ ಆ್ಯಡ್ಲಿನ್ ಕ್ಯಾಸ್ತಲಿನಳಿಗೆ, ನಮ್ಮ ನಾಡಿನ ಜನತೆ ಇವಳ ಗೆಲುವಿಗಾಗಿ ಪ್ರೋತ್ಸಾಹ ನೀಡಬಹುದಾಗಿದೆ