ರಾಜ್ಯದಲ್ಲಿ ಕೊರೊನಾ ಸಂಕಷ್ಟಕ್ಕೆ ಸಚಿವರ 1 ವರ್ಷದ, ಶಾಸಕರ 1 ತಿಂಗಳ ವೇತನ ಕಡಿತ

JANANUDI.COM NETWORK

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಾವಳಿ ಮತ್ತೆ ಸಂಕಷ್ಟ ವಿಪರೀತವಾಗಿದ್ದು.ಈ ಸಂಕಷ್ಟದಿಂದ ಕರ್ನಾಟಕವನ್ನು ಪಾರು ಮಾಡಲು ರಾಜ್ಯ ಸರ್ಕಾರ ಮತ್ತೆ ಲಾಕ್ ಡೌನ್ ಮೊರೆ ಹೋಗಿದ್ದು, ಇದರಿಂದ ಆರ್ಥಿಕತೆಗೆ ಹೊಡೆತ ಬೀದಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರೀ ಸಂಕಷ್ಟ ಎದುರಾಗಿದೆ.

   ಹಾಗಾಗಿ  ಸರಾಕಾರ ಲಾಕ್ ಡೌನ್ ನಷ್ಟವನ್ನು ಸರಿದೂಗಿಸಲು   ಸರಕಾರಿ ನೌಕರರ ಒಂದು ತಿಂಗಳ ಸಂಬಳ ಕಡಿತಗೊಳ್ಳುವುದೆಂದು ಸರಕಾರ ಘೋಶಿಸಿತ್ತು, ಆದರೆ ಈಗ ಎಚ್ಚೆತುಗೊಂಡತ್ತೆ, ಈ ನಿರ್ಣ್ಯವನ್ನು ಕೈಬಿಟ್ಟು ತಮ್ಮ ಸರಕಾರದ ತಮ್ಮದೇ  ಸಚಿವರ 1 ವರ್ಷದ ವೇತನ ಹಾಗೂ ಶಾಸಕರ 1 ತಿಂಗಳ ವೇತನ ಕಡಿತಗೊಳಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಚರ್ಚೆ ನೆಡೆದಿದೆ.

     ಸಭೆಯಲ್ಲಿ ಬಹುತೇಕ ಸಚಿವರು ತಮ್ಮ ವೇತನ ಕಡಿತಕ್ಕೆ ಸಮ್ಮತಿ ಸೂಚಿಸಿದ್ದಾರೆ. ಶಾಸಕರ ವೇತನ ಕಡಿತದಿಂದ ಕೋಟ್ಯಂತರ ಹಣ ಸರ್ಕಾರಕ್ಕೆ ಉಳಿಯಲಿದೆ. ಈ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲು ರಾಜ್ಯ ಸರ್ಕಾರ ಮುಂದಾಗಿದೆ.