ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದರ ಮೂಲಕ ಆರ್ಥಿಕ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಾಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರಿಗೆ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ಹಾಲು ಉತ್ಪಾದಕರು ರಸಮೇವು ಘಟಕಗಳನ್ನು ಪ್ರಾರಂಭಿಸಲು ಹಾಲು ಒಕ್ಕೂಟದಿಂದ ಪ್ರೋತ್ಸಾಹ ಧನ ನೀಡಲಾಗುವುದು. ಇತರ ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ಹೇಳಿದರು.
ಮೃತಪಟ್ಟ 17 ರಾಸುಗಳ ಮಾಲೀಕರಿಗೆ ರೂ. 9.75 ¯ಕ್ಷ ಮೌಲ್ಯದ ಚೆಕ್‍ಗಳನ್ನು ವಿತರಿಸಲಾಗಿದೆ. ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಕಟ್ಟಡ ಅನುದಾನವಾಗಿ ರೂ.1.50, ರಸಮೇವು ಘಟಕದ ಪ್ರಾರಂಭಿಸಲು ಪ್ರೋತ್ಸಾಹ ಧನವಾಗಿ ತಲಾ ರೂ.15 ಸಾವಿರ ಮೌಲ್ಯದ ಚೆಕ್ ವಿತರಿಸಲಾಗಿದೆ ಎಂದು ಹೇಳಿದರು.
ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದಿಸಲು ಹಸಿರು ಮತ್ತು ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಮತ್ತು ಟ್ರಿಯೋ ಎನ್‍ಬಿ ಸ್ಯಾಕ್ ಪುಡಿ ಬಳಸಬೇಕು. ಕೆಚ್ಚಲು ಬಾವು ಹಾಗೂ ಕಾಲುಬಾಯಿ ಜ್ವರ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು, ಫಲಾನುಭವಿಗಳು, ವಿಸ್ತರಣಾಧಿಕರಿಗಳು ಇದ್ದರು.