ಶ್ರೀನಿವಾಸಪುರ : ಹಾಲು ಕುಡಿಯುವುದರಿಂದ ಹಾಲು ಮಾನವ ದೇಹಕ್ಕೆ ಒಂದು ರೀತಿಯಲ್ಲಿ ಪೋಷಕಾಂಶಗಳ ಆಗರವಾಗಿದೆ. ಗುಣಮಟ್ಟದ ಪ್ರೋಟಿನ್ಗಳ ಮೂಲವಾಗಿದೆ. ಹಾಲು ಮಾನವನ ಮೂಳೆಯ ಆರೋಗ್ಯಕ್ಕೆ ಬೇಕಾದ ಆಹಾರವಾಗಿದೆ ಎಂದು ಕೋಚಿಮುಲ್ ಜಿಲ್ಲಾ ಹಾಲು ಒಕ್ಕೂಟದ ಶ್ರೀನಿವಾಸಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಎಂ.ಮುನಿರಾಜು ಹೇಳಿದರು.
ಪಟ್ಟಣದ ಕೆಎಂಫ್ ಶಾಖೆಯಿಂದ ಶನಿವಾರ ವಿಶ್ವ ಹಾಲು ದಿನಾಚರಣೆಯನ್ನು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಗುಡ್ ಲೈಫ್ ಹಾಲನ್ನು ವಿತರಣೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.
ಆರೋಗ್ಯಕ ಜೀವನ, ಆಹಾರ ಪದ್ದತಿ ಮತ್ತು ಆಹಾರ ಉತ್ಪಾದನೆಯಲ್ಲಿ ಹಾಲಿನ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಹಾಲು ಮತ್ತು ಇತರ ಡೈರಿ ಉತ್ಪನ್ನಗಳ ಪ್ರಯೋಜನಗಳನ್ನು ತಿಳಿಯಲು ಈ ದಿನ ವಿಶ್ವ ಹಾಲು ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತವು ಹಾಲು ಉತ್ಪಾದಿಸುವ ಅತಿದೊಡ್ಡ ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಕ್ಷೀರ ಕ್ಷೇತ್ರದ ಹರಿಕಾರ ದಿ|| ಎಂ.ವಿ.ಕೃಷ್ಣಪ್ಪನವರ ಜನ್ಮ ದಿನವನ್ನ ಶಿಬಿರ ಕಚೇರಿಯಲ್ಲಿ ಆಚರಣೆ ಮಾಡಲಾಯಿತು . ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಶ್ರೀನಿವಾಸಪುರ ಶಿಬಿರ ಕಚೇರಿಯ ವಿಸ್ತರಣ ಅಧಿಕಾರಿ ಎಸ್.ವಿನಾಯಕ್, ಎನ್.ಶಿವಶಂಕರ್, ಎಂ.ಜಿ.ಶ್ರೀನಿವಾಸ್, ಗೋಪಾಲಕೃಷ್ಣ , ನರಸಿಂಹರಾಜು ಹಾಗು ಸಿಬ್ಬಂದಿಗಳು ಇದ್ದರು.