ಕುಂದಾಪುರ, ಅ.20:ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಎಲ್ಲಾ 40ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಕೊಡಮಾಡಿತು.
ಈ ಕೊಡುಗೆಯ ಸಮಾರಂಭಕ್ಕೆ ಸ್ಥಳೀಯ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿ ‘ದೇವರಿಗೆ ಎಲ್ಲರೂ ಸಮಾನರು, ದೇವರು ಎಲ್ಲರನ್ನು ಪ್ರೀತಿಸುತ್ತಾರೆ, ನಾವುಗಳು ಮಾತ್ರ ಅಸಮಾನತೆಯಿಂದ ನೋಡುತ್ತೇವೆ, ವಿಶೇಷ ಮಕ್ಕಳಿಗೆ ನೋಡಿಕೊಳ್ಳುವ ಶಿಕ್ಷಕರು, ಶಿಕ್ಷಕೇತರರ ಸೇವೆ ದೇವರು ಮೆಚ್ಚುವಂತಹ ಕೆಲಸ, ಇದು ದೇವರ ಕೆಲಸ, ನಿಮ್ಮ ಪ್ರಯತ್ನಗಳಿಂದ ಈ ಮಕ್ಕಳು ಸಮಾಜದಲ್ಲಿ ಒಳ್ಳೆಯ ಕೆಲಸಮಾಡುವಂತಹ ಉತ್ತಮ ಕೆಲಸ ಮಾಡುತ್ತೀರಿ, ಈ ಶಾಲೆಯ ಆಡಳಿತ ಮಂಡಳಿಗೆ ಮತ್ತು ಶಿಕ್ಷಕರು, ಶಿಕ್ಷಕೇತರರಿಗೆ ನಿಮಗೆ ಶುಭವನು ಕೋರುತ್ತೇವೆ ಹಾಗೇ ಮಿಲಾಗ್ರಿಸ್ ಕ್ರೆಡಿಟ್ ಸೊಸೈಟಿ ಬರೆ ಲಾಭವನ್ನು ನೋಡದೆ, ಅವರಿಗೆ ಸಿಕ್ಕ ಲಾಭದಲ್ಲಿ ಕೆಲ ಭಾಗವನ್ನು ಇಂತಹ ಮಕ್ಕಳಿಗೆ ಕಲಿಕಾ ಸಾಮಾಗ್ರಿಕೊಟ್ಟು ಉತ್ತಮ ಕೆಲಸವನ್ನು ಮಾಡುತ್ತಾರೆ, ದೇವರು ಅವರ ಮೇಲಿ ಆಶಿವದಿಸಲಿ, ಇನ್ನು ಹೆಚ್ಚಿನ ಸಹಾಯ ಮಾಡಲು ಸಹಕಾರ ನೀಡಲಿ, ಅವರ ಆಡಳಿತ ಮಂಡಳಿಗೂ ಶುಭವನ್ನು ಕೋರುತ್ತೇನೆ’ ಅವರ ಸಂದೇಶದಲ್ಲಿ ತಿಳಿಸಿದರು.
ಸೊಸೈಟಿಯ ಕುಂದಾಪುರ – ಭಟ್ಕಳ ವಿಭಾಗದ ಅಭಿವ್ರದ್ದಿ ಅಧಿಕಾರಿ ರೋಹಿತ್ ಮೋಗೆರಾ, ನಮ್ಮ ಸೊಸೈಟಿ ಬರೆ ಲಾಭವನ್ನು ನೋಡದೆ, ಸಾಮಜದ ಒಳಿತಿಗಾಗಿ ಇಂತಹ ಸಹಾಯವನ್ನು ವರ್ಷಪ್ರತಿ ಮಾಡಿಕೊಂಡು ಬರುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಸೊಸೈಟಿಯ ನಿರ್ದೇಶಕರಾದ ಮೈಕಲ್ ಡಿಸೋಜಾ, ಉಪಸ್ಥಿತರಿದ್ದರು.
ಶಾಲೆಯ ಪ್ರಾಂಶುಪಾಲರಾದ ಲೀಲಾವತಿ ಕರ್ಕಡ ವಿಶೇಷ ಶಾಲೆಯ ಬಗ್ಗೆ ತಿಳಿಸಿ ಈ ಚೈತನ್ಯ ವಿಶೇಷ ಶಾಲೆ ಶೋಭಾ ಪಿ. ಸೋನ್ಸ್ ಅವರ ಕಾಳಜಿಯಿಂದ 1997 ರಲ್ಲಿ ಹುಟ್ಟಿತು, ಮೊದಲು ಮಕ್ಕಳಿಂದ ಆರಂಭವಾಗಿ ಇಂದು 40 ಮಂದಿ ಮಕ್ಕಳಿದ್ದಾರೆ. ಮೆನೇಜಿಂಗ್ ಟ್ರಸ್ಟಿಯಾಗಿ ಶೋಭಾ ಪಿ. ಸೋನ್ಸ್ ಮತ್ತು ಕಾರ್ಯದರ್ಶಿಯಾಗಿ ಸುಜಾತ ನೆಕೆತ್ರಾಯ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತಿದ್ದಾರೆ, ಈ ಶಾಲೆಗೆ ಸರಕಾರದಿಂದ ಸ್ವಲ್ಪ ಅನುದಾನ ಸಿಗುತ್ತದೆ ಮತ್ತು ದಾನಿಗಳ ಸಹಕಾರದಿಂದ ಈ ಶಾಲೆ ನಡೆಯುತ್ತದೆ, ಇಲ್ಲಿ 9 ಜನ ಶಿಕ್ಷಕರು -ಶಿಕ್ಷಕೇತರ ಸಿಬಂದಿ ಸೇವೆ ಮಾಡುತ್ತಾರೆಂದು ತಿಳಿಸಿ ಧನ್ಯವಾದಗಳನ್ನು ನೀಡಿದರು.
ಮಿಲಾಗ್ರಿಸ್ ಸೊಸೈಟಿಯ ಸಿಬಂದಿಗಳಾದ ಪ್ರವೀಕಾ ಬರೆಟ್ಟೊ ಸ್ವಾಗತಿಸಿದರು, ಶ್ವೇತಾ ದೆವಾಡಿಗ ಕಾರ್ಯಕ್ರಮ ನಿರೂಪಿಸಿದರು.