ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಪತನ

JANANUDI.COM NETWORK


ಪಂಜಾಬ್, ಮೇ. 21 : ದುರಂತ ಘಟನೆಯೊಂದರಲ್ಲಿ, ಪಂಜಾಬ್ನ ಮೊಗಾ ಬಳಿ ಶುಕ್ರವಾರ ಮುಂಜಾನೆ ನಡೆದ ಮಿಗ್ -21 ವಿಮಾನ ಅಪಘಾತವಾಯಿತು.ಈ ಘಟನೆಯಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಮಾರಣಾಂತಿಕ ಗಾಯಗಳಿಂದ ಸಾವನ್ನಪ್ಪಿದ್ದಾರೆ.
ಶುಕ್ರವಾರ ಮುಂಜಾನೆ 1 ಗಂಟೆ ಸುಮಾರಿಗೆ ಮೊಗಾದ ಬಾಗಾಪುರಾನದ ಲ್ಯಾಂಗಿಯಾನಾ ಖುರ್ದ್ ಗ್ರಾಮದಲ್ಲಿ ಐಎಎಫ್ನ ಮಿಗ್ -21 ಅಪಘಾತಕ್ಕೀಡಾಗಿದೆ. ಘಟನೆಯು ವಾಡಿಕೆಯ ತರಬೇತಿ ಹಂತದಲ್ಲಿ ನಡೆದಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪೈಲಟ್ನ ದುಃಖಿತ ಕುಟುಂಬಕ್ಕೆ ಸಂತಾಪವನ್ನು ಐಎಎಫ್ ಟ್ವಿಟರ್ ನಲ್ಲಿ ಸೂಚಿಸಿದೆ . ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.
ವಿಶೇಷವೆಂದರೆ, ಇದು ಈ ವರ್ಷದಲ್ಲಿ ಮಿಗ್ -21 ವಿಮಾನದ ಮೂರನೇ ಅಪಘಾತವಾಗಿದ್ದು,. ಮಾರ್ಚ್ ನಲ್ಲಿ, ಐಎಎಫ್ ನ ಗ್ರೂಪ್ ಕ್ಯಾಪ್ಟನ್ ಮಿಗ್ -21 ಬೈಸನ್ ವಿಮಾನವನ್ನು ಮಧ್ಯ ಭಾರತದ ಏರ್ ಬೇಸ್ನಲ್ಲಿ ಅಪಘಾತವಾಗಿತ್ತು. ಇದಕ್ಕೂ ಮೊದಲು ಜನವರಿಯಲ್ಲಿ ಭಾರತೀಯ ವಾಯುಸೇನೆಯ ಮಿಗ್ -21 ವಿಮಾನ ರಾಜಸ್ಥಾನದಲ್ಲಿ ಅಪಘಾತಕ್ಕೀಡಾಗಿತ್ತು. ಇದರಿಂದಾಗಿ ಈ ವರ್ಷದಲ್ಲಿ ಮಿಗ್ -21 ವಿಮಾನದ ಮೂರು ಅಪಘಾತ ಆದಂತಾಯಿತು
.