JANANUDI.COM NETWORK

ಬೆಂಗಳೂರು(29.08.2021) : ಬೆಂಗಳೂರಿನಲ್ಲಿ ನಾಯಂಡನ ಹಳ್ಳಿಯಿಂದ ಕೆಂಗೇರಿ ವರೆಗಿ ನವಿಸ್ತರಿತ ಮೆಟ್ರೋ ಮಾರ್ಗ 7.5 ಕಿ.ಮೀ. ದೂರ ಸಂಚಾರವನ್ನು ಸಿಎಂ ಇಂದು ಉದ್ಭಾಟಿಸಿದರು. ನಂತರ ಮಾತನಾಡಿದ ಅವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಯಲ್ಲಿ ಮೆಟ್ರೋಮಾರ್ಗವನ್ನು ರಾಮನಗರ, ಮಾಗಡಿ ರಸ್ತೆ ಮತ್ತು ರಾಜನ ಕುಂಟೆ ವರೆಗೂ ವಿಸ್ತರಣೆ ಮಾಡಲು ಯೋಜನೆ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡನೇ ಹಂತ ಪೂರ್ಣ ಗೊಂಡ ನಂತರರ 3ನೇಹಂತವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಬೆಂಗಳೂರಿನಿಂದ ಬರುತ್ತಿರುವ ಜಿಡಿಪಿ ಪ್ರಮಾಣದಲ್ಲೂ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಒಂದು ವರ್ಷದಲ್ಲಿ ಬೆಂಗಳೂರಿಗೆ ಸಂಬಂಧಿಸಿದ ಅಮೃತ ಯೋಜನೆಗಳನ್ನು ಜಾರಿ ಮಾಡಲಾಗುವುದು. ನಗರದಲ್ಲಿ ಹೆಚ್ಚುತ್ತಿರುವ ಸಂಚಾರದ ದಟ್ಟಣೆಯನ್ನು ಕಡಿಮೆಮಾಡಲು ಒಟ್ಟು 12 ರಸ್ತೆಗಳನ್ನು ಗುರುತು ಮಾಡಲಾಗಿದೆ ಎಂದರು.
