JANANUDI.COM NETWORK
ಬೆಂಗಳೂರು: ಭಾರೀ ಕುತೂಹಲ ಭಾರೀ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಸುಮಾರು 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಪಕ್ಷ ಬಿಜೆಪಿ ಪಡೆದುಕೊಂಡಿದ್ದು 12 ಕ್ಷೇತ್ರಗಳು, ಬಿಜೆಪಿ ಆಡಳಿತ Iೂಢವಾಗಿದ್ದು, ಇಷ್ಟು ಪಡೆದಿದ್ದು ಕಡಿಮೆಯೆ ಆಗಿದಂತಾಗಿದೆ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ಸೂಚನೆ ಎಂದು ಕಾಂಗ್ರೆಸ್, ಬಿಜೆಪಿ ಹಾಗೂ ನಾಯಕರು ಹೇಳಿಕೊಂಡಿದೆ.. ಹಾಗಾಗಿ ರಾಜ್ಯದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಭಾರೀ ಪೈಪೆÇೀಟಿ ಉಂಟಾಗುವ ಮುನ್ಸೂಚನೆ ಕಾಣತೊಡಗಿದೆ.
ಒಟ್ಟಾರೆಯಾಗಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಂಜುನಾಥ್ ಬಂಡಾರಿ ಜಯ ಗಳಿಸಿದ್ದಾರೆ
ಬೀದರ್: ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಜಯ ಗಳಿಸಿದ್ದಾರೆ
ಕೋಲಾರ: ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಕುಮಾರ್ ಜಯ ಗಳಿಸಿದ್ದಾರೆ
ತುಮಕೂರು: ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಜಯ ಗಳಿಸಿದ್ದಾರೆ
ಧಾರವಾಡ: ಧಾರವಾಡ ಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಜಯ ಗಳಿಸಿದ್ದಾರೆ
ವಿಜಯಪುರ, ಬಾಗಲಕೋಟ: ವಿಜಯಪುರ, ಬಾಗಲಕೋಟ ದ್ವಿಸದಸ್ಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸುನೀಲಗೌಡ ಪಾಟೀಲ್ ಜಯ ಗಳಿಸಿದ್ದಾರೆ.
ರಾಯಚೂರು, ಕೊಪ್ಪಳ: ರಾಯಚೂರು ಹಾಗೂ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಜಯ ಗಳಿಸಿದ್ದಾರೆ
ಮೈಸೂರು: ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯ ಜಯ ಗಳಿಸಿದ್ದಾರೆ
ಮಂಡ್ಯ: ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಜಯ ಗಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಜಯ ಗಳಿಸಿದ್ದಾರೆ
ಬೆಳಗಾವಿ: ಬೆಳಗಾವಿ ಕ್ಷೇತ್ರದಲ್ಲಿ ಬಹಳ ಜಿದ್ದಾಜಿದ್ದಿಯ ಪೈಪೆÇೀಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜ ಹಟ್ಟಿಹೊಳಿ ಜಯ ಗಳಿಸಿದ್ದಾರೆ.