ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ದಿನಾಚರಣೆ

JANANUDI.COM NETWORK

ಮೂಡುಬೆಳ್ಳೆ: ವಿದ್ಯಾರ್ಥಿಗಳಲ್ಲಿ ಹಲವಾರು ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಶಾಲೆಯಲ್ಲಿ ಪ್ರತಿಭೆಗಳ ಬೆಳವಣಿಗೆಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಯಾವ ವಿದ್ಯಾರ್ಥಿಯೂ ಅವಕಾಶಗಳನ್ನು ಬಳಸಿಕೊಳ್ಳುತ್ತಾನೊ ಅವನು ಜಯಶಾಲಿಯಾಗುತ್ತಾನೆ.ಆದ್ದರಿಂದ ಪ್ರತಿಭೆಯ ಜೊತೆಗೆ ಪ್ರಯತ್ನವೂ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ” ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜೊರ್ಜ್ ಡಿಸೋಜರವರು ಹೇಳಿದರು .ಅವರು ಕಾಲೇಜಿನಲ್ಲಿ ನಡೆದ 2019 -20 ಮತ್ತು 2020 -21 ನೇ ಸಾಲಿನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ವಾರಂಟ್ ಅಂಡರ್ ಆಫೀಸರ್ ಶ್ರೀ ನಾಗೇಶ್ ಲಕ್ಷ್ಮಣ್ ವಾಗ್ಳೆ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಫರ್ನಾಂಡಿಸ್ ,ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಲಿಯಾಸ್ ಡಿಸೋಜಾ ,ವಿದ್ಯಾರ್ಥಿ ನಾಯಕ ದಿಲೀಪ್ ಕುಮಾರ್ ವೆದಿಕೆಯಲ್ಲಿ ಉಪಸ್ತಿತರಿದ್ದರು.

ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದಾ ಎಡ್ವರ್ಡ್ ಲಾರ್ಸನ್ ಡಿಸೋಜ ಸ್ವಾಗತಿಸಿದರು. ಪ್ರೌಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಸುನೀತಾ ಕಾಮತ್ ವಂದಿಸಿದರು. ಶ್ರಿ ಜೋನ್ ಕ್ಯಾಸ್ತಲೀನೊ, ಶ್ರಿ ಸ್ಟ್ಯಾನಿ ಮಿನೆಜಸ್, ಶ್ರೀ ವಲೇರಿಯನ್ ಕ್ರಾಸ್ತಾ, ಶ್ರಿಮತಿ ಜೆಸಿಂತಾ ಲೋಬೊ,ಶ್ರಿ ದಿಲೀಪ್ ಕುಮಾರ್, ಮತ್ತು ಶ್ರೀ ಜೋಸೆಪ್ ಡಿಸೋಜ ವಿಜೇತರ ಪಟ್ಟಿಗಳನ್ನು ವಾಚಿಸಿದರು. ಶ್ರೀ ಸುಧೀರ್ ನಾಯಕ್ ರವರು ಸನ್ಮಾನಿತರ ಪರಿಚಯ ಮಾಡಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ರವಿಂದ್ರರವರನ್ನು ಅಭಿನಂದಿಸಲಾಯಿತು. ಉಪನ್ಯಾಸಕಿ ಶೃತಿ ಡಿಸೋಜ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿಧ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು, ಸಿಬ್ಬಂದಿಗಳು, ದಾನಿಗಳು, ಹೆತ್ತವರು, ಹಳೆ ವಿದ್ಯಾರ್ಥಿಗಳು ಮತ್ತು ಊರಿನ ವಿಧ್ಯಾಭಿಮಾನಿಗಳು ಹಾಜರಿದ್ದರು.