ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛ ಅಭಿಯಾನ ಸ್ವಚ್ಛ ಪರಿಸರದಿಂದ ಸ್ವಸ್ಥ ಸಮಾಜ ನಿರ್ಮಾಣ – ಪ್ರಶಾಂತ್ ಪೂಜಾರಿ

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು

ಸ್ವಚ್ಛ ಪರಿಸರ ನಿರ್ಮಾಣ ಕಾರ್ಯದಲ್ಲಿ ಪ್ರತಿಯೋರ್ವರೂ ಪಾಲ್ಗೊಳ್ಳಬೇಕು. ಪರಿಸರ ಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗ ದೂರವಾಗುವುದು ಹಾಗೂ ನಮ್ಮ ಸ್ವಚ್ಛತಾ ಅಭಿಯಾನಕ್ಕೆ ಊರಿನ ಜನತೆ ಸಹಕಾರ ನೀಡಿದಲ್ಲಿ ಖಂಡಿತವಾಗಿಯೂ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದರು. ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಗಾಮ ಪಂಚಾಯತ್, ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಇದರ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಅವರ 15ನೇ ಜನ್ಮದಿನಾಚರಣೆಯ ವರ್ಷಾಚರಣೆಯ ಅಂಗವಾಗಿ ಆಯೋಜಿಸಿದ ಸ್ವಚ್ಛತಾ ಜಾಗೃತಿ ಹಾಗೂ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಬ್ಬನಡ್ಕದಿಂದ ಮಂಜರಪಲ್ಕೆಗೆ ಹೋಗುವ ಪರಿಸರದ ರಸ್ತೆಯ ಇಕ್ಕೆಲಗಳಲ್ಲಿದ್ದ ಕಸಕಡ್ಡಿ, ಪ್ಲಾಸ್ಟಿಕ್, ಬಾಟಲಿ ಇನ್ನಿತರ ತ್ಯಾಜ್ಯಗಳನ್ನು ಸ್ವಚ್ಛತೆಗೊಳಿಸಲಾಯಿತು. ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷರಾದ ಇನ್ನ ವಿಠಲ ಮೂಲ್ಯ, ಸ್ವಚ್ಛತಾ ಕಾರ್ಯಕ್ರಮದ ನಿರ್ದೇಶಕ, ನಂದಳಿಕೆ ರಾಜೇಶ್ ಕೋಟ್ಯಾನ್, ಬಾಲಕೃಷ್ಣ ಮಡಿವಾಳ, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್, ಕೋಶಾಧಿಕಾರಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯರಾದ ಹರೀಶ್ ಪೂಜಾರಿ, ಕೀರ್ತನ್ ಕುಮಾರ್, ಪ್ರಶಾಂತ್ ಬೋಳ, ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಹರಿಣಿ ಪೂಜಾರಿ, ಪದ್ಮಶ್ರೀ ಪೂಜಾರಿ, ಆರತಿ ಕುಮಾರಿ, ಅಶ್ವಿನಿ ಪ್ರಭಾಕರ್, ಭಜನಾ ಮಂಡಳಿ ಸದಸ್ಯೆ ಆಶಾ ಆಚಾರ್ಯ ಮೊದಲಾದವರಿದ್ದರು.