ಶ್ರೀನಿವಾಸಪುರ : ಮಾನಸಿಕ ಅಸ್ವಸ್ಥ ದಿನಾಚರಣೆಯು ಒಂದು ರೀತಿಯಲ್ಲಿ ಮಾನಸಿಕವಾಗಿ ಅಸ್ವಸ್ಥಾದವರ ಬಗ್ಗೆ ಜಾಗೃತಿ ಹಾಗು ಸಹಾನುಭೂತಿ ಮತ್ತು ರೂಪಾಂತರವನ್ನು ಉತ್ತೇಜಿಸುವ ಕಾರ್ಯಕ್ರಮವಾಗಿದೆ ಎಂದು ಶ್ರೀನಿವಾಸಪುರ ಪ್ರಧಾನ ಸಿವಿಲ್ ನ್ಯಾಯಾದೀಶರಾದ ಬಿ.ಕೆ.ಮನು ಹೇಳಿದರು.
ತಾಲೂಕಿನ ಪಿಲ್ಲಕುಂಟೆ ಗ್ರಾಮದ ದಿವ್ಯಜ್ಯೋತಿ ವೃದ್ಧಾಶ್ರಮದಲ್ಲಿ ಕಾನೂನು ಸೇವಾ ಸಮಿತಿ ವತಿಯಿಂದ ಮಂಗಳವಾರ ಮಾನಸಿಕ ಅಸ್ವಸ್ಥ ದಿನ ಮತ್ತು ಹಿರಿಯ ನಾಗರೀಕರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನಸಿಕ ಆರೋಗ್ಯ ಪರಿಸ್ಥಿತಿಗಳ ಪ್ರಭುತ್ವ ಮತ್ತು ಪ್ರಭಾವದ ಬಗ್ಗೆ ಅರಿವು ಮೂಡಿಸುವ ಸಾಮೂಹಿಕ ಪ್ರಯತ್ನಗಳು ಇದಾಗಿವೆ. ಇಂತಹ ಕಾರ್ಯಕ್ರಮಗಳಿಂದ ಮಾನಸಿಕ ಆರೋಗ್ಯಕ್ಕೆ ಸಂಬಂದಿಸಿದ ಕಳಂಕವನ್ನು ಕಡಿಮೆ ಮಾಡಲು ಮತ್ತು ಅಗತ್ಯವಿದ್ದಾಗ ಸಹಾಯ ಮತ್ತು ಬೆಂಬಲವನ್ನು ಪಡೆಯಲು ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾನಸಿಕ ಅಸ್ವಸ್ಥರನ್ನು ಸರಿಪಡಿಸುವ ವೇದಿಕೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಮಾನಸಿಕ ಅಸ್ವಸ್ಥರು ಪಾಲ್ಗುಳ್ಳುವದರಿಂದ ತಮ್ಮ ಸಮಸ್ಯೆಗಳು ಇದ್ದರೆ ಅವುಗಳನ್ನು ಆಪ್ತಸಮಾಲೋಚನೆಗಳನ್ನು ನಡೆಸಿ ಬಗಹರಿಸಕೊಳ್ಳಬಹುದಾಗಿದೆ ಎಂದರು.
ಇನ್ನು ಹಿರಿಯ ನಾಗರೀಕರಿಗೆ ಸಮಾಜ ಗೌರವ ಕೊಡಬೇಕು. ಅವರಿಗೆ ಸಿಗಬೇಕಾದ ಅವಕಾಶಗಳು ಒದಗಿಸುವ ನೆಲೆಯಲ್ಲಿ ಸ್ಪಂದಿಸಬೇಕು. ಅವರಿಗೆ ಸಾಂತ್ವನದ ಮಾತುಗಳು ನಾಡಿ ಅವರೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದರು.
ಹಿರಿಯರು ಆರೋಗ್ಯ ನೆಮ್ಮದಿ ಜೀವನವನ್ನು ದ್ಯಾನ, ಯೋಗ ಮಾಡುವುದ ಮೂಲಕ ನಿಮ್ಮ ಆರೋಗ್ಯವನ್ನು ಸರಿಪಡಿಸಿಕೊಳ್ಳುತ್ತಾ ನೆಮ್ಮದಿ ಜೀವನವನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಶರೀನ್‍ತಾಜ್ ಮಾತನಾಡಿ ಹಿರಿಯರು ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು, ನೆಮ್ಮದಿ ಜೀವನವನ್ನು ನಡೆಸುವಂತೆ ಸಲಹೆ ನೀಡಿ , ತಾಲೂಕು ಆಡಳಿತವು ನಿಮ್ಮೊಂದಿಗೆ ಇದ್ದು , ಸರ್ಕಾರದ ಸೌಲಭ್ಯಗಳನ್ನು ಪಡೆದು ನೆಮ್ಮದಿ ಜೀವನವನ್ನು ನಡೆಸುವಂತೆ ಸಲಹೆ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಜಯರಾಮೇಗೌಡ, ವಕೀಲರಾದ ಜಯಲಕ್ಷ್ಮೀ, ಎನ್.ಎಸ್.ಶ್ರೀನಿವಾಸಗೌಡ, ಆರೋಗ್ಯ ಇಲಾಖೆ ಕ್ಷೇತ್ರ ಅಧಿಕಾರಿ ಆಂಜಲಮ್ಮ ಮಾತನಾಡಿದರು.
ಟಿಎಚ್‍ಒ ಮಹಮ್ಮದ್ ಶರೀಫ್, ದಿವ್ಯ ಜ್ಯೋತಿ ವೃದ್ದಾಶ್ರಮ ಕಾರ್ಯದರ್ಶಿ ನರಸಿಂಹಪ್ಪ, ದಿವ್ಯ ಜ್ಯೋತಿ ವೃದ್ಧಾಶ್ರಮ ನಿರ್ದೇಶಕ ಟಿ.ಎಂ.ರಾಮಕೃಷ್ಣೇಗೌಡ ಇದ್ದರು.