ಶ್ರೀನಿವಾಸಪುರ : ಆಟಓಟಗಳಿಂದ ದೇಹದಂಡನೆಯ ಜತೆ ಮಾನಸಿಕ ದೈರ್ಯ,ಛಲ ಹೆಚ್ಚುವುದರೊಂದಿಗೆ ಆರೋಗ್ಯವಂತ ಸಮಾಜದ ಸೃಷ್ಟಿಗೆ ಕಾರಣವಾಗುತ್ತದೆ. ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿಪ್ರಾಯಪಟ್ಟರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಕಂಡ್ಲೇವಾರಿಪಲ್ಲಿಯ ಕಾವೇರಿ ಪಬ್ಲಿಕ್ ಶಾಲಾವರಣದಲ್ಲಿ ಸೋಮವಾರ ಶಿಕ್ಷಣ ಇಲಾಖೆ ಹಾಗು ಪಂಚಾಯಿತ್ರಾಜ್ ಇಲಾಖೆ ,ರ್ರಂವಾಪಲ್ಲಿ ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ಹಿರಿಯ ಪ್ರಾಥಮಿಕ ಮತ್ತು ಪ್ರೌಡಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟವನ್ನ ಉದ್ಗಾಟಿಸಿ ಮಾತನಾತನಾಡಿದರು.
ಈಗಾಗಲೇ ಪಟ್ಟಣದ ಅಮಾನಿಕೆರೆಯಂಗಳದಲ್ಲಿ ಕ್ರೀಡಾಂಗಣದ ಕಾಮಗಾರಿ ನಡೆಯುತ್ತಿದ್ದು, ತಾಲೂಕಿನ ರಾಯಲ್ಪಾಡು , ಗೌನಿಪಲ್ಲಿ, ಲಕ್ಷಿö್ಮÃಪುರ, ಯಲ್ದೂರು, ಸುಗುಟೂರು ಗ್ರಾಮಗಳಲ್ಲಿ ಮಿನಿ ಕ್ರೀಡಾಕೂಟಕ್ಕೆ ಯೋಜನೆಯನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಕಾಮಾಗರಿಯನ್ನು ಪ್ರಾರಂಭಸಿಲಾಗುವುದು. ಅಲ್ಲದೆ ತಾಲೂಕಿನ ಯುವ ಜನತೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಐದು ಸಾವಿರ ಎಕರೆಗಳಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪಿಸಲು ಸರ್ಕಾರ ಮಟ್ಟದಲ್ಲಿ ರೂಪರೇಷಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಕ್ರೀಡೆಗಳಲ್ಲಿ ದ್ವೇಷ, ಅಸೂಯೆ, ಸೇಡು ಎಂಬುವುದೇ ಇಲ್ಲ, ಬದಲಾಗಿ ಪರಸ್ಪರ ಪ್ರೀತಿ , ಒಗ್ಗಟಿನ ಬಲ ,ಏಕಾಗ್ರತೆ ,ಕ್ರೀಯಾಶೀಲತೆ , ಬುದ್ದಿವಂತಿಕೆಯನ್ನು ಚುರುಕುಗೊಳಿಸುವಂತಹ ಶಕ್ತಿ ತುಂಬಿವೆ ಎಂದರು.
ಬಿಇಒ ಬಿ.ಸಿ.ಮುನಿಲಕ್ಷö್ಮಯ್ಯ ಮಾತನಾಡುತ್ತಾ ಕ್ರೀಡಾಪಟುಗಳು ಸೋಲುಗೆಲುವು ಸಮನಾಗಿ ಸ್ವೀಕರಿಸಿ ಸೋಲೆ ಗೆಲುವಿನ ಸೋಪಾನವೆಂದು ತಿಳಿಯಬೇಕು ಎಂದು ತಿಳಿಸಿದರು.
ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಶಿಕ್ಷಕಿ ಎನ್.ಮಾದವಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಇಒ ಎ.ಎನ್.ರವಿ, ಅಕ್ಷರ ಸಹಾಯಕ ನಿರ್ದೇಶಕಿ ಟಿ.ಆರ್.ಸುಲೋಚನ, ಬಿಆರ್ಸಿ ಕೆ.ಸಿ.ವಸಂತ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಟಿಪಿಒ ಎಸ್.ವೆಂಕಟಸ್ವಾಮಿ, ರ್ರಂವಾರಿಪಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಗಣಸುಧಾಕರ್, ಪಿಡಿಒ ಏಜಾಜ್ಪಾಷ, ಈ ದಿನದ ಊಟದ ದಾನಿ ಅಡ್ಡಗಲ್ ಕೆ.ಎಸ್.ಇಂದೂಧರ್, ಬಹುಮಾನಗಳ ಪ್ರಾಯೋಜಕರಾದ ಸಿ.ಶಿವಣ್ಣ, ವಿ,ಕಿಟ್ಟಣ್ಣ, ಸುರೇಶ್, ತಪಸ್ವಿ ಶಿಕ್ಷಕ ಬಾಬು ರಾಯಲ್ಪಾಡು ಗ್ರಾ.ಪಂ ಮಾಜಿಸದಸ್ಯ ಸಿಮೆಂಟ್ನಾರಾಯಣಸ್ವಾಮಿ, ರ್ರಂವಾರಿಪಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ನಾಗಮಣಿ ಹಾಗು ಸದಸ್ಯರಾದ ನರಸಿಂಹರಾಜು, ಸುದರ್ಶನ್, ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಕಾವೇರಿ ಪಬ್ಲಿಕ್ ಶಾಲೆ ಆಡಳಿತ ಮಂಡಲಿ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಕೆ.ಬಿ.ಮಹೇಶ್, ಪ್ರಾಥಮಿಕ ,ಪ್ರೌಡಾಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಹೋಬಳಿಗೆ ಸಂಬAದಿಸಿದ ಸಿಆರ್ಪಿಗಳು , ತೀರ್ಪುಗಾರರಾಗಿ ದೈಹಿಕ ಶಿಕ್ಷಕರು ಆರ್.ಕೃಷ್ಣಯ್ಯ ತಂಡವು ಕಾರ್ಯನಿರ್ವಹಿಸಿತು. ಹೋಬಳಿಗಳ ಸರ್ಕಾರಿ , ಅನುದಾನಿತ ಶಾಲೆ, ಅನುದಾರಹಿತ ಮುಖ್ಯ ಶಿಕ್ಷಕರು, ಶಿಕ್ಷಕರು ಭಾಗವಹಿಸಿದರು.