

ಉಡುಪಿ; 113 ವರ್ಷಗಳ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕಿನ 19ನೇ ಶಾಖೆಯು ಬೆಳ್ಮಣ್ ಮುಖ್ಯ ರಸ್ತೆಯ ಎಲ್ವಿನ್ ಟವರ್ಸ್ಗ ನೆಲಮಹಡಿಯಲ್ಲಿ 2025, ಮಾರ್ಚ್ 2ರಂದು ನೂತನ ಶಾಖೆಯನ್ನು ಕರ್ನಾಟಕ ವಿಧಾನ ಪರಿಷತ್ನ ಶಾಸಕ ಶ್ರೀ ಐವನ್ ಡಿಸೋಜ ಉದ್ಭಾಟಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅತಿಥಿಗಳೊಂದಿಗೆ ದೀಷ ಬೆಳಗಿಸಿದರು. ನೂತನ ಶಾಖೆಯನ್ನು ಸಂತ ಜೋಸೆಫ್ ಚರ್ಚ್ ಬೆಳ್ಮಣ್ನ ಧರ್ಮಗುರು ವಂ. ಫಾ| ಫೆಡ್ರಿಕ್ ಮಸ್ಕರೆನ್ಟಸ್ ಆಶೀರ್ವದಿಸಿದರು.
ಭದ್ರತಾ ಕೊಠಡಿಯನ್ನು ದಾಯ್ದಿವಲ್ವ್ ಮೀಡಿಯಾ ಪ್ರೆಕ. ಲಿ. ಇದರ ಸಂಸ್ಥಾಪಕರಾದ ಶ್ರೀ ವಾಲ್ಟರ್ ನಂದಳಿಕೆ ಉದ್ರಾಟಿಸಿದರು. ಇ-ಸ್ಟಾಂಪಿಸಿಗ್ ವ್ಯವಸ್ಥೆಯನ್ನು ಬೆಳ್ಮಣ್ ಗ್ರಾಮ ಪಂಚಾಯತ್ ಅಥಕ್ಷರಾದ ಶ್ರೀಮತಿ ರಾಮೇಶ್ವರಿ ಎಮ್. ಶೆಟ್ಟಿ ಉದ್ಯಾಟಿಸಿದರು. ಅನಿವಾಸಿ ಉಧ್ಯಮಿ ಶ್ರೀ ರೋನ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಸಹಕಾರ ರತ್ನ ಶ್ರೀ ಅನಿಲ್ ಲೋಬೊ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಪರಿಚಯಿಸಲು ಬೆಳ್ಮಣ್ ಪರಿಸರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಭೇಟಿ ಮಾಡಿದ ಸಂದರ್ಭದಲ್ಲಿ ಬೆಳ್ಮಣ್ ಪರಿಸರದ ಜನರು ನೀಡಿದ ಸ್ವಾಗತ, ಸಹಕಾರ ಮತ್ತು ಬೆಂಬಲಕ್ಕಾಗಿ ವಂದನೆಗಳನ್ನು ಸಲ್ಲಿಸಿದರು. ಬೆಳ್ಮಣ್ ಶಾಖೆಯು ಪ್ರಾರಂಭವಾದ ಒಂದು ವರ್ಷದೊಳಗೆ ಅಭಿವ್ರದ್ಧಿ ಹೊಂದಲು ಮತ್ತು ಸಮಾಜಕ್ಕೆ ಸೇವೆ. ಸಲ್ಲಿಸಲು ಸಹಕಾರ ಮತ್ತು ಬೆಂಬಲವನ್ನು ಕೋರಿದರು. ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ಸೇವೆಗಳನ್ನು ಎಂ.ಸಿ.ಸಿ. ಬ್ಯಾಂಕ್ ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ಗೂಗಲ್ ಪೇ ಮತ್ತು ಯುಪಿಐ ಪಾವತಿಗಳಂತಹ ಡಿಜಿಟಲ್ ಬ್ಯಾಂಕಿಸಿಗ್ ಸೌಲಭ್ಯಗಳನ್ನು ಬ್ಯಾಂಕ್ ಶೀಘ್ರವೇ ಪರಿಚಯಿಸಲಿದೆ ಎಂದು ವಿವರಿಸಿದರು. ಬ್ಯಾಂಕಿನ ಪ್ರಗತಿಯೇ ನಮ್ಮ. ಆಡಳಿತ ಮಂಡಳಿಯ ಗುರಿಯಾಗಿದ್ದು, ಯಾವುದೇ ಅಡೆತಡೆಗಳು ಬಂದರೂ ಜಗ್ಗದೆ, ಬಗ್ಗದೆ, ಕುಗ್ಗದೆ ಮತ್ತು ಹಿಂದೆ ನೋಡದೆ. ಬ್ಯಾಂಕಿನ ಪ್ರಗತಿಗಾಗಿ ಹಗಲಿರುಳು ದುಡಿಯುವುದು ಮತ್ತು ಮುನ್ನಡೆಯವುದು ನಮ್ಮೆಲ್ಲರ ಧ್ಯೇಯವಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ ಮುಂದಿನ. ದಿನಗಳಲ್ಲಿ ಬ್ಯಾಂಕಿನ ಬೆಳವಣಿಗೆಗೆ ಸಹಕಾರ ಮತು ಬೆಂಬಲವನ್ನು ಕೋರಿದರು.
ನೂತನ ಶಾಖೆಯನ್ನು ಆಶೀರ್ವಚನಗೈದು ಮಾತನಾಡಿದ ವಂ. ಫಾ| ಫ್ರೆಡ್ರಿಕ್ ಮಸ್ಕರೆನ್ಹಸ್ ಬೆಳ್ಮಣ್ನಲ್ಲಿ ನೂತನ ಶಾಖೆಯನ್ನು ಆರಂಭಿಸಿ ಗ್ರಾಹಕ ಸ್ನೇಹಿ ವಾತವಾರಣವನ್ನು ಒದಗಿಸಿದ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸುತ್ತಾ. ಬ್ಯಾಂಕಿನ ಮುಂದಿನ ಯೋಜನೆಗಳಿಗೆ ಆಶೀರ್ವಾದವನ್ನು ಕೋರಿ ಸಮಾಜದಲ್ಲಿ ವಿಶೇಷವಾಗಿ ಬಡವರು ಮತ್ತು ಕೆಳವರ್ಗದ ಜನರಿಗೆ ಬ್ಯಾಂಕ್ ಸಹಕಾರ ಸಿಗಲಿ ಹಾರೈಸಿದರು.
ಬೆಳ್ಮಣ್ ಪರಿಸರದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಾಚರಿಸುತ್ತಿರುವ ಹ್ಯೂಮಾನಿಟಿ ಟ್ರಸ್ಟ್(ರಿ) ಮತ್ತು ದೇವ್ದಿತಾ ಚಾರಿಟೇಬಲ್ ಆಂಡ್ ವೇಲ್ಟೇರ್ ಟ್ರಸ್ಟ್ ಇದರ ಮುಖ್ಯಸ್ಥರಿಗೆ ಬ್ಯಾಂಕಿನ ದತ್ತ ನಿಧಿಯಿಂದ ಸಹಾಯಧನವನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಎಂ ಎಲ್ ಸಿ ಶ್ರೀ ಐವನ್ ಡಿಸೋಜರವರು ಬೆಳ್ಮಣ್ನಲ್ಲಿ ಹೊಸ ಶಾಖೆಯನ್ನು ತೆರೆದಿರುವ ಬ್ಯಾಂಕಿಗೆ ಅಭಿನಂದನೆ ಸಲ್ಲಿಸಿದರು. ಬ್ಯಾಂಕ್ ವಿಶ್ವಾಸದಿಂದ ನಡೆಯುತ್ತಿದೆ. ಬೆಳ್ಮಣ್ನ ಜನತೆ ಎಂ.ಸಿ.ಸಿ. ಬ್ಯಾಂಕಿನ ಶಾಖೆಗಾಗಿ ಕಾಯುತ್ತಿದ್ದು, ಶಾಖೆಯನ್ನು ಆರಂಭಿಸಿದ ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ಮಂಡಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ಯಾಂಕು ಕ್ರಿಸ್ಮಸ್ ಸಂಧರ್ಭದಲ್ಲಿ ಆಯೋಜಿಸಿದ ಫೊಟೊ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ, ಬ್ಯಾಂಕಿನ ಅಧ್ಯಕ್ಷರ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭ ಕೋರಿದರು.
ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕ್ರೀಮತಿ ರಾಮೇಶ್ವರಿ ಎಂ. ಶೆಟ್ಟಿಯವರು ಶುಭ. ಹಾರೈಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಮಾಸ್ಟರ್ ಉದ್ಭವ್ ಜಿ. ದೇವಾಡಿಗ, ನವೀನ್ ಶೆಣೈ (ಹ್ಯೂಮನಿಟಿ ಟ್ರಸ್ಟ್) ಅಕ್ಕತಾ ಪೂಜಾರಿ ಬೋಳ, ಜಿತೇಂದ್ರ ಪುರ್ಟಾಡೊ, ರೆಮೆಡಿಯಾ ಡಿಸೋಜಾ. ಕಟ್ಟಡ ಮ್ಹಾಲಿಕರಾದ ಶ್ರೀ ಎಡ್ವರ್ಡ್ ಮಿಸ್ಕಿತ್ ಮತ್ತು ಇಂಜೀನಿಯರ್ ಶ್ರೀ ಕಾರ್ತಿಕ್ ಕಿರಣ್, ಶಿರ್ವ ಶಾಖೆಯ ಅತ್ತುತ್ತಮ ಗ್ರಾಹಕ ಕ್ರೀ ಫ್ರಾನ್ಸಿಸ್ ಡಿಸೋಜ ಮತ್ತು ನೂತನ ಶಾಖೆಯಲ್ಲಿ ಖಾತೆಯನ್ನು ಆರಂಭಿಸಿದ ಗ್ರಾಹಕರನ್ನು ಈ ಇವರನ್ನು ಸನ್ಮಾನಿಸಲಾಯಿತು. ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಾಮೇಶ್ವರಿ ಎಂ. ಶೆಟ್ಟಿಯವರು ಸಾಂರ್ದಭಿಕವಾಗಿ ಮಾತನಾಡಿ ಶುಭ ಹಾರೈಸಿದರು. ನಿರ್ದೆಶಕರಾದ ಶ್ರೀ ಡೆವಿಡ್ ಡಿಸೋಜ, ಶ್ರೀ ಅನಿಲ್ ಪತ್ರಾವ, ಶ್ರೀ ಮೆಲ್ವಿನ್ ವಾಸ್, ಶ್ರೀ ರೋಶನ್ ಡಿಸೋಜ, ಡಾ| ಫ್ರೀಡಾ ಡಿಸೋಜ, ಡಾ| ಜೆರಾಲ್ಡ್ ಪಿಂಟೊ, ಶ್ರೀ ಎಲ್ರೊಯ್ ಕಿರಣ್ ಕ್ರಾಸ್ತೊ, ಶ್ರೀ ಜೆ.ಪಿ. ರೊಡ್ರಿಗಸ್, ಶ್ರೀ ಸಿ.ಜಿ.ಪಿಂಟೊ, ಶ್ರೀ ವಿನ್ಸೆಂಟ್. ಲಸ್ರಾದೊ, ಶ್ರೀ ಸುಶಾಂತ್ ಸಲ್ಪಾನ್ನಾ, ಶ್ರೀ ಆಲ್ವಿನ್ ಪಿ. ಮೊಂತೇರೊ, ಶ್ರೀಮತಿ ಶರ್ಮಿಳಾ ಮಿನೇಜಸ್, ಶ್ರೀ ಫೆಲಿಕ್ಸ್ ಡಿಕ್ರುಜ್, ಮಹಾಪ್ರಬಂಧಕರಾದ ಶ್ರೀ ಸುನಿಲ್ ಮಿನೇಜಸ್, ಬ್ರಹ್ಮಾವರ ಶಾಖೆಯ ಶ್ರೀ ಒವಿನ್ ರೆಬೆಲ್ಲೊ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಶೈನಿ ಲಸ್ರಾದೊ ವಂದಿಸಿದರು. ಶ್ರೀ ಎಲ್ಲನ್ ಹಿರ್ಗಾನ್ ನಿರೂಪಿಸಿದರು.























