ಕುಂದಾಪುರ,ಜೂ.5: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳ ವಿತರಣೆಯನ್ನು ಜೂ. 5 ರಂದು ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂ|ಭಗಿನಿ ಸುಪ್ರಿಯಾ ವಹಿಸಿಕೊಂಡಿದ್ದರು.
ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ”ಶಿಕ್ಷಕರು ಮಕ್ಕಳಿಗೆ ಜಾನ್ಞವನ್ನು ಹಂಚುತ್ತಾರೆ, ನಾವು ಶಾಲೆಯಲ್ಲಿ ಕಲಿತದ್ದನ್ನು ನಾವು ಸಮಾಜದ ಒಳಿತಿಗಾಗಿ ವಿನೀಯೊಗಿಸಬೇಕು, ಇಲ್ಲಿ ಚೆನ್ನಾಗಿ ಜಾನ್ಞವನ್ನು ಪಡೆದುಕೊಂಡು ನೀವು ಜಾನ್ಞವಂತರಾಗಬೇಕು, ಹಾಗೆ ಮಾಡದೆ ಇದ್ದಲ್ಲಿ, ಕಲಿತದ್ದು ವ್ಯರ್ಥವಾಗುತ್ತೆ, ನಾವು ಉತ್ತಮ ನಾಗರಿಕರಾಗಿ ನೆರೆಹೊರೆಯವರಿಗೆ ಸಹಾಯ ಮಾಡಬೇಕು, ನೀವು ಎನೇನೊ ಕನಸುಗಳನ್ನು ಕಟ್ಟಿಕೊಂಡು ಬಂದಿದ್ದಿರಿ ಅದನ್ನು ಸಾಕಾರಗೊಳಿಸಲು ಪ್ರಯತ್ನ ಪಡೆಯಬೇಕು, ನಾವೇನು ಇವತ್ತು ನಿಮಗೆ ಪುಸ್ತಕ ಮತ್ತು ಕೊಡೆಗಳ ರೂಪದಲ್ಲಿ ಸಹಾಯ ಮಾಡಿದ್ದೇವೆ, ಇದರ ಹಿಂದೆ, ನಿಮ್ಮ ಶಾಲಾ ಸಂಸ್ಥೆಗಳಿಂದ, ನಮ್ಮ ಬ್ಯಾಂಕಿನಲ್ಲಿ ವಿನೀಯೊಗವಿದೆ, ಇದನ್ನು ನಾವು ಪ್ರತಿಉಪಕರಕ್ಕಾಗಿ ಮಾಡುತಿದ್ದೇವೆ, ಹಾಗೇ ನಾವು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತೀರುವ ವಿದ್ಯಾಥಿಗಳಿಗೆ ಸಹಾಯ ಮಾಡುತ್ತೀದೆವೆ, ನೀವು ಕಲಿಯುತ್ತೀರುವದು ಬರೆ ಶಾಲೆ ಅಲ್ಲ, ಇದು ವಿದ್ಯಾ ದೇಗುಲ, ಚೆನ್ನಾಗಿ ಕಲಿತು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು” ಎಂದು ಸಂದೇಶ ನೀಡಿದರು.
ಅಧ್ಯಕ್ಷತೆ ಸ್ಥಾನವನ್ನು ವಹಿಸಿದ ವಂ|ಭಗಿನಿ ಸುಪ್ರಿಯಾ ಅತಿಥಿಗಳ ಜೊತೆ ಬ್ಯಾಗ್ ಮತ್ತು ಪುಸ್ತಕಗಳನ್ನು . ಕಾರ್ಯಕ್ರಮದಲ್ಲಿ ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಎಲ್ರೋಯ್ ಕಿರಣ್ ಕ್ರಾಸ್ಟೊ, ಡಾ.ಜೆರಾಲ್ಡ್ ಪಿಂಟೊ, ಬ್ಯಾಂಕಿನ ವ್ಯವಸ್ಥಾಪಕರಾದ ಸಂದೀಪ್ ಕ್ವಾಡ್ರಸ್, ಜ್ಯೋತಿ ಬರೆಟ್ಟೊ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ವಂ|ಭಗಿನಿ ಐವಿ ಸ್ವಾಗತಿಸಿದರು, ಶಿಕ್ಷಕ ಪುಟಾರ್ಡೊ ಶಿಕ್ಷಕಿ ಸರ್ಸಪತಿ ಧನ್ಯವಾದಗಳನ್ನು ಅರ್ಪಿಸಿದರು, ಶಿಕ್ಷಕ ಮೈಕಲ್ ಪುಟಾರ್ಡೊ ನಿರೂಪಿಸಿದರು.