ಕುಂದಾಪುರ : ತಾಲೂಕಿನ ಕೋಟೇಶ್ವರದಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ-2 ಯೋಜನಾ ಕಚೇರಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಲಕ್ಷ್ಮಿ ಪೂಜೆ ಹಾಗೂ ವಾಹನ ಪೂಜೆ ನೆರವೇರಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಮಾಡಿದ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡರವರು ಮಾತಮಾಡಿ ನವರಾತ್ರಿ ಹಬ್ಬ ಎಲ್ಲರಿಗೂ ಸನ್ಮಂಗಲವನ್ನು ಕರುಣಿಸಲಿ, ದುಷ್ಟಶಕ್ತಿಗಳ ಸಂಹಾರವಾಗಲಿ ಎಂದು ಪೂಜೆಯಲ್ಲಿ ಭಾಗವಹಿಸಿ ಎಲ್ಲರಿಗೂ ಶುಭವನ್ನು ಕೋರಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ನಿರ್ದೇಶಕರಾದ ನಾಗರಾಜ್ ಶೆಟ್ಟಿ, ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಉಲ್ಲಾಸ್ ಮೆಸ್ತಾ, ಯೋಜನಾಧಿಕಾರಿಗಳಾದ ನಾರಾಯಣ ಪಾಲನ್, ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಪ್ರಬಂಧಕರಾದ ಶ್ರೀನಿವಾಸ್ ನಾಯಕ್ , ಕೋಟೇಶ್ವರ ವಲಯ ಅಧ್ಯಕ್ಷರಾದ ಬಸವರಾಜ್ ರವರು , ಜನಜಾಗೃತಿ ಸದಸ್ಯರು, ಭಜನಾ ಪರಿಷತ್ ಸಂಯೋಜಕರು , ಯೋಜನೆಯ ಸಿಬ್ಬಂದಿ ವರ್ಗದವರು ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು. ಕಛೇರಿಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ಕಾರ್ಯಕ್ರಮ ನೆರವೇರಿತು ನಂತರ ಎಲ್ಲಾ ವಾಹನಗಳ ಪೂಜೆಯು ಬಹಳ ವಿಜೃಂಭಣೆಯಿಂದ ಜರುಗಿತು.