ಕುಂದಾಪುರದಲ್ಲಿ ಪಾದ ತೊಳೆಯುವ ದಿನ – ಪಾದ ತೊಳೆಯುವುದೆಂದರೆ ಪರರ ಸೇವೆ ಮಾಡುವುದು : ಫಾ|ಆಲ್ವಿನ್ ಸೀಕ್ವೇರಾ


ಕುಂದಾಪುರ,ಎ.7; “ಯೇಸು ಇಂದು ಶಿಸ್ಯರ ಜೊತೆ ಭೋಜನ ಎರ್ಪಡಿಸಿ, ಒಂದು ರೊಟ್ಟಿ ಮುರಿದು ಇದು ನನ್ನ ದೇಹ, ಹಾಗೇ ದ್ರಾಕ್ಷರಸವನ್ನು ತೆಗೆದುಕೊಂಡು ಕುಡಿಯಲು ಕೊಟ್ಟು ಇದನ್ನು ನನ್ನ ರಕ್ತವೆಂದು ನೀವು ಅಂದುಕೊಳ್ಳಬೇಕು, ಇದನ್ನು ನೀವು ಮುಂದೆ ನನ್ನ ನೆನಪಿಗಾಗಿ ಆಚರಿಸಬೇಕು, ಅಂದಿನಿಂದ ಈ ರೀತಿಯ ಭೋಜನವು ಪವಿತ್ರ ಬಲಿದಾನವಾಗಿ ಮಾರ್ಪಟ್ಟಿತ್ತು. ನಾವೇನೊ ಪವಿತ್ರ ಬಲಿದಾನದಲ್ಲಿ ಭಾಗಿಯಾಗುತ್ತೇವೆ ಆದರೆ, ಇನ್ನೊಂದನ್ನು ಯೇಸು ಹೇಳಿದ್ದು ಮರೆತು ಬಿಟ್ಟಿದ್ದೇವೆ. ನನ್ನ ನೆನಪಿಗೆ ರೊಟ್ಟಿ ತಿನ್ನಿ ಮತ್ತು ದ್ರಾಕ್ಷರಸ ಕುಡಿಯಿರಿ ಅನ್ನುವ ಮೊದಲು, ಯೇಸು ಊಟಕ್ಕೆ ಕುಳಿತುಕೊಂಡವರು ಎದ್ದು, ತಮ್ಮ ಸೊಂಟಪಟ್ಟಿಯನ್ನು ಕಟ್ಟಿಕೊಂಡು, ಶಿಸ್ಯರ ಪಾದಗಳನ್ನು ತೊಳೆದರು, ಯೇಸು ಸ್ವಾಮಿ ಇದನ್ನು ಮಾಡಿದ್ದು ಬರೇ ಕಾಟಾಚರಕ್ಕಲ್ಲ. ನನ್ನ ಶಿಸ್ಯರು ಕೂಡ ಪರರ ಪಾದ ತೊಳೆಯಬೇಕು ಎಂದು ಹೇಳಿದರು. ಇದನ್ನು ಕೇವಲ ಪರಂಪರೆಯಂತೆ ಪಾದ ತೊಳೆಯುವದಲ್ಲ, ಪರರ ಮೇಲೆ ಕಾರುಣೆಯಿಟ್ಟು ಪರರ ಸೇವೆ ಮಾಡಬೇಕು, ಬಡವ ಬಲ್ಲಿಗರಿಗೆ, ದೀನದಲಿತರಿಗೆ ಅವಶ್ಯಕತೆಗೆ ಸ್ಪಂದಿಸಬೇಕು, ಸಹಾಯ ಮಾಡಬೇಕು, ರೋಗಿಗಳ ಶುಷುರ್ರೆ ಮಾಡಬೇಕು, ಇಂತಹ ಹ್ರದಯವಂತಿಕೆಯ ಸೇವೆಗಳನ್ನು ಮಾಡಲಿಕ್ಕಾಗಿ, ತನ್ನ ಶಿಸ್ಯರ ಪಾದಗಳನ್ನು ತೊಳೆಯುವ ಮೂಲಕ ಸ್ಪಷ್ಟ ಪಡಿಸಿದ್ದು. ಇದು ಯೇಸುವಿನ ಶಿಶ್ಯರಿಗೆ ಮಾತ್ರವಲ್ಲ ನಮ್ಮೇಲ್ಲರಿಗೂ ಅನ್ವಯವಾಗುತ್ತೆ, ಆವಾಗ ಮಾತ್ರ ಇಗರ್ಜಿಯಲ್ಲಿ ಅರ್ಪಿಸುವ ಬಲಿದಾನ ಪೂರ್ಣವಾಗುತ್ತದೆ, ಇಲ್ಲಿ ಬಲಿದಾನ ಅರ್ಪಿಸಿ, ಹೊರಗಡೆ ಮನೆಯಲ್ಲಿ, ನಮ್ಮ ನೆರೆಮನೆಯರಲ್ಲಿ, ಸಮಾಜದಲ್ಲಿ ಸೇವೆಯ ಕಾರ್ಯಗಳನ್ನು ಮಾಡದಿದ್ದರೆ ನಮ್ಮ ಬಲಿದಾನ ಅಪೂರ್ಣವಾಗುತ್ತದೆ” ಎಂದು 452 ವರ್ಷಗಳ ಇತಿಹಾಸ ಇರುವ ಚಾರಿತ್ರಿಕ ಹಿನ್ನೆಲೆಯುಳ್ಳ ಕುಂದಾಪುರ ರೋಜರಿ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ಆಚರಣೆಯನ್ನು ಎಪ್ರಿಲ್ 6 ರಂದು ನಡೆಸಿಕೊಟ್ಟ ಕಟ್ಕರೆ ಬಾಲ ಯೇಸುವಿನ ಆಶ್ರಮದ ಮೇಲ್ವಿಚಾರಕರಾದ ವಂ|ಫಾ|ಆಲ್ವಿನ್ ಸೀಕ್ವೇರಾ ಸಂದೇಶ ನೀಡಿದರು. ನೀಡಿದರು


“ಯೇಸು ಕ್ರಿಸ್ತರು ಶ್ರೇಷ್ಟರಾದರೂ, ಅವರು ತಾವು ಶ್ರೇಷ್ಟರೆಂದು ಅಹಂಕಾರ ಪಟ್ಟುಕೊಳ್ಳಲಿಲ್ಲ, ಎಲ್ಲವನ್ನು ವಿಧೇಯತೆಯಿಂದ ನಡೆದುಕೊಂಡರು. ನಾವು ಕೂಡ ಹಾಗೇ, ತಾನೂ ಶ್ರೇಷ್ಟ, ಬುದ್ದಿವಂತ, ಪ್ರತಿಭಾವಂತ, ನನ್ನ ವಾಕ್ಯವೇ ನಡೆಯಬೇಕು ಎಂಬ ಅಹಂಕಾರ ತೊರೆಯಬೇಕು, ತಮ್ಮ ವರಗಳನ್ನು, ಕೌಶಲ್ಯಗಳನ್ನು, ಪ್ರಭಾವನ್ನು,ಎನ್ನನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ನಮಗೆ ದೊರಕಿದ ಪ್ರತಿಭೆ ವರಗಳನ್ನು, ಇದೆಲ್ಲ ತಮ್ಮ ಸ್ವಂತದಲ್ಲವೆಂದು ತಿಳಿದುಕೊಂಡು, ಇದೆಲ್ಲಾ ನನಗೆ ದೇವರು ಕೊಟ್ಟಿದ್ದು ಎಂದು ತಿಳಿದು, ಪರರ ಒಳಿತಿಗಾಗಿ ಉಪಯೋಗಿಸಬೇಕು” ಎಂದು ತಿಳಿಸಿ ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು.


ಕುದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಚರ್ಚ್ ಪರಿಧಿಯಲ್ಲಿನ ವಾಳೆಯ ಪ್ರತಿನಿಧಿಗಳ ಪಾದ ತೊಳೆಯುವ ಆಚರಣೆ ನೆರವೇರಿಸಿದರು. ಹೀಗೆ ಪಾದ ತೊಳೆಯುವ ವಿಧಿ, ಪರಮ ಪ್ರಸಾದದ ಸಂಸ್ಕಾರ, ಗುರುದೀಕ್ಷೆಯ (ಯಾಜಕತ್ವ) ಸಂಸ್ಕಾರ ಹೀಗೆ ಯೇಸು ಒಂದೇ ದಿನ ಸ್ಥಾಪಿಸಲ್ಪಟ್ಟ ಮೂರು ಸಂಸ್ಕಾರಗಳ ಅವಿಷ್ಕರಿಸಿದ ಪವಿತ್ರ ದಿನವನ್ನು, ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಧಾರ್ಮಿಕ ವಿಧಿಯಲ್ಲಿ ಸಹಾಯಕ ಧರ್ಮಗುರು ವಂ| ಅಶ್ವಿ ಆರಾನ್ಹಾ ಭಾಗಿಯಾಗಿ ಪೂಜಾ ವಿಧಾನಗಳಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.