ಕುಂದಾಪುರದಲ್ಲಿ ಪಾದ ತೊಳೆಯುವ ದಿನ – ನಿಮ್ಮನ್ನು ಪ್ರೀತಿಸಿದಂತೆ, ನೀವು ಪರರನ್ನು ಪ್ರೀತಿಸಿ : ಫಾ|ಸ್ಟ್ಯಾನಿ ತಾವ್ರೊ

JANANUDI.COM NETWORK


ಕುಂದಾಪುರ,ಎ.4; “ಯೇಸುಸ್ವಾಮಿ ತಾವೇ ಶಿಷ್ಯರ ಪಾದಗಳನ್ನು ತೊಳೆದು ನಾವು ಪರರ ಸೇವೆಯನ್ನು ಹೇಗೆ ಮಾಡಬೇಕೆಂದು ನಮಗೆ ಕಲಿಸಿದ್ದಾರೆ. ಯೇಸು “ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಪರರನ್ನು ಪ್ರೀತಿಸಿ’ ಎಂದು ತನ್ನ ಶಿಷ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದು ಅದು ಕೇವಲ ಶಿಷ್ಯರಿಗಲ್ಲ, ಅದು ನಮಗೂ ಅನ್ವಯವಾಗುತ್ತೆ” ಎಂದು 450 ವರ್ಷಗಳ ಪುರಾತನವಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು
ಅವರು ಗುರುವಾರದಂದು ಯೇಸುವಿನ ಕೊನೆಯ ಭೋಜನದ ಸಂಭ್ರಮ ಶಿಷ್ಯರ ಪಾದ ತೊಳೆಯುವ ಮತ್ತು ಯಾಜಕ ದೀಕ್ಷಾ ಸಂಸ್ಕಾರ ಧಾರ್ಮಿಕ ಕ್ರಿಯೆಗಳು ಗುರುವಾರದಂದು ನೆಡೆಸುತ್ತಾ ಆಯ್ದ ಜನರ ಪಾದಗಳನ್ನು ತೊಳೆದು “ಜನರು ಆದಿಯಿಂದಲೇ ಜಗತ್ತಿನಾದ್ಯಂತ ದೇವರಿಗೆ ಜಾನುವಾರು ಬಲಿದಾನ ಅರ್ಪಿಸಿಸುತಿದ್ದರು. ಆದರೆ ಜಗತ್ತಿನ ಪಾಪಗಳು ಅತೀಯಾದಾಗ ದೇವಪುತ್ರನಾದ ಯೇಸು ದೇವರಿಗೆ ತನ್ನನ್ನೆ ಬಲಿದಾನ ನೀಡಿ ಮನುಜರನ್ನು ಪಾಪದಿಂದ ಪರಿವರ್ತನೆಗೊಳಿಸಲು ಸಿದ್ದನಾಗುತ್ತಾನೆ, ಅದಕ್ಕಿಂತ ಮೊದಲು ತನ್ನ ಶಿಷ್ಯರಿಗೆ ಕೊನೆಯ ಭೋಜವನ್ನು ಏರ್ಪಡಿಸಿ, ರೊಟ್ಟಿಯನ್ನು ಮುರಿದು ಹಂಚಿಕೊಂಡು, ಇದು ನನ್ನ ಮಾಂಸ ಮತ್ತು ದ್ರಾಕ್ಷರಸ ನೀಡಿ ಇದು ನನ್ನ ರಕ್ತ, ಎಂದು ತೀಳಿಸಿ, ಇದನ್ನು ನನ್ನ ನೆನಪಿಗಾಗಿ ಮಾಡಿರಿ, ಎಂದು ಯೇಸು ಪರಮ ಪ್ರಸಾದದ ಸಂಸ್ಕಾರವನ್ನು ಸ್ಥಾಪಿಸಿದರು. ಇದಕ್ಕಿಂತ ಶ್ರೇಷ್ಟ ಬಲಿದಾನ ಮತ್ತೊಂದಿಲ್ಲ” ಎಂದು ತಿಳಿಸುತ್ತಾ, ನಾವು ಧರ್ಮಗುರುಗಳಾದವರೂ ಕೂಡ ನಾವು ಪೂರ್ಣರಲ್ಲ, ನಾವೂ ಮನುಷ್ಯರು ನಮ್ಮಲ್ಲಿಯೂ ಕೊರತೆಗಳಿರುತ್ತವೆ, ಯಾರೂ ಪೂರ್ಣರಲ್ಲ, ಅದಕ್ಕಾಗಿ ನಾವು ಒಳ್ಳೆಯ ಧರ್ಮಗುರುಗಳಾಗಲು ನಿಮ್ಮ ಪ್ರಾಥನೇಯ ಅಗತ್ಯ ಇದೆ, ಕ್ರೈಸ್ತರು ದಾನ ಸೇವೆ ಪ್ರೀತಿಗೆ ಬದ್ದರಾಗಿರುವರು, ಅದರಂತೆ ನಾವುನಡೆದುಕೊಳ್ಳೊಣ, ಪವಿತ್ರ ಧರ್ಮಸಭೆ ಜೀವಿತದ ಬುಡ ಮತ್ತು ಶಿಖರವಾಗಿದೆಯೆಂದು ನಮಗೆ ನೆನಪಿರಬೇಕು’ ಎಂದು ಹೇಳಿ ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು.
ಈ ಧಾರ್ಮಿಕ ವಿಧಿಗಳಲ್ಲಿ ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಮತ್ತು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್ ಅಮ್ರತ್ ಮಾರ್ಟಿಸ್ ಭಾಗಿಯಾದರು.