ಕುಂದಾಪುರ,ಮಾ.29; “ನಾವು ಯಾಜಕರು ಪವಿತ್ರ ಬಲಿದಾನ ಅರ್ಪಿಸುವಾಗ ರೊಟ್ಟಿಯನ್ನು ತೆಗೆದುಕೊಂಡು ‘ಆತ ಪರಾಧೀನದರಾದ ರಾತ್ರಿ ಅವರು ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕøತಜ್ಞತಾಸ್ತೋತ್ರವನ್ನು ಸಲ್ಲಿಸಿ ಇದು ನಿಮಗಾಗಿ ಒಪ್ಪಿಸಲಾಗುವ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ ಎಂಬ ವಾಕ್ಯವನ್ನು ಪಠಿಸುತ್ತೇವೆ, ಇದು ಯಾಕೆ ಹೇಳಲಾಗುತ್ತದೆ, ಆದರೆ ಅಂದು ಯೇಸು ಕ್ರಿಸ್ತರು ಆ ಭೋಜನದಲ್ಲಿ ಸಂತೋಷದಿಂದ ಭೋಜನ ಮಾಡಿದ್ದಾರೆ ಎಂದು ನೀವು ತಿಳಿದುಕೊಂಡಿದ್ದಿರೋ? ಇಲ್ಲ ಅವರು ಸಮಾಧಾನದಿಂದ ಭೋಜನ ಮಾಡಿರಲಿಲ್ಲ, ಯಾಕೆಂದರೆ, ಅವರಿಗೆ ತಿಳಿದಿತ್ತು, ನನ್ನನ್ನು ಇಂದು ನನ್ನ ಶಿಸ್ಯನೇ ಹಿಡಿದುಕೊಡುತ್ತಾನೆಂದು, ನನ್ನ ಶಿಸ್ಯರೆಲ್ಲರು, ನನ್ನನ್ನು ಸೈನಿಕರು ಹಿಡಿದುಕೊಟ್ಟಾಗ ಓಡಿಹೋಗುತ್ತಾರೆಂದು, ಮತ್ತು ನನ್ನನ್ನು ಕಠಿಣವಾಗಿ ಹಿಂಸಿಸಿ ಶಿಲುಭೆಗೇರಿಸಲಾಗುತ್ತೆ ಎಂದು ಯೇಸುವಿಗೆ ತಿಳಿದಿತ್ತು. ಆದರೂ ಜುದಾಸನೊಂದಿಗೆ ಕೊನೆಯ ಭೋಜನವನ್ನು ಏರ್ಪಡಿಸಿದ್ದರು, ಯಾಕೆಂದರೆ ಅವರು ವೈರಿಗಳನ್ನು ಮಿತ್ರರರನ್ನು ಎಲ್ಲರನ್ನು ಪ್ರೀತಿಸುತ್ತಾರೆ’ ಹಾಗೇ, ನಮ್ಮ ವೈರಿಗಳನ್ನು ಕೂಡ ನಾವು ಪ್ರೀತಿಸಬೇಕು. ಹಾಗೇಯೆ ನಾವೆಲ್ಲ ಪರರರ ಸೇವೆ ಮಾಡಬೇಕು, ಅದುವೇ ಶಿಸ್ಯರ ಪಾದ ತೊಳೆದು ಅನುಕರಿಸಲು ಹೇಳಿದರು, ಎಂದು ಕಾರ್ಮೆಲ್ ಧರ್ಮಗುರು ವಂ| ಜೊಸ್ವಿ ಡಿಸೋಜಾ ಹೇಳಿದರು. ಅವರು ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆದ ಹೋಲಿ ರೋಜರಿ ಚರ್ಚಿನಲ್ಲಿ ಕೊನೆಯ ಭೋಜನದ ಹಬ್ಬ ಧಾರ್ಮಿಕ ಕಾರ್ಯಕ್ರಮದ ಮುಖ್ಯ ಯಾಜಕರಾಗಿ ಸಂದೇಶ ನೀಡಿದರು.
ಕುದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಚರ್ಚ್ ಪರಿಧಿಯಲ್ಲಿನ ವಾಳೆಯ ಪ್ರತಿನಿಧಿಗಳ, ವೇದಿ ಸೇವಕರ, ಮತ್ತು ಸಾಮಾನ್ಯ ಜನರ ಪಾದ ತೊಳೆಯುವ ಆಚರಣೆ ನೆರವೇರಿಸಿ, ಪರಮ ಪ್ರಸಾದದ ಆರಾಧನೆಯನ್ನು ನೆಡಸಿಕೊಟ್ಟರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಪ್ರಾರ್ಥನ ವಿಧಿಗಳಲ್ಲಿ ಭಾಗವಹಿಸಿದರು. ಪರಮ ಪ್ರಸಾದದ ಸಂಸ್ಕಾರ, ಗುರುದೀಕ್ಷೆಯ (ಯಾಜಕತ್ವ) ಸಂಸ್ಕಾರ ಹೀಗೆ ಯೇಸು ಒಂದೇ ದಿನ ಸ್ಥಾಪಿಸಲ್ಪಟ್ಟ ಮೂರು ಸಂಸ್ಕಾರಗಳ ಆಚರಣೆಯನ್ನು ನೆಡಸಲಾಯಿತು. ಈ ಪ್ರಾರ್ಥನ ವಿಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.