ತಲ್ಲೂರು,ಮಾ.18: ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗ ನೀಡಿರುವ ಮಾರ್ಗಸೂಚಿಗಳು ಮತ್ತು ಕಾರ್ಯಸೂಚಿಗೆ ಅನುಸಾರವಾಗಿ, ಕುಂದಾಪುರ ವಲಯದ ವಿವಾಹಿತ ದಂಪತಿಗಳ ಅನುಕೂಲಕ್ಕಾಗಿ ವೀಶೆಷವಾಗಿ ಮದುವೆಯಾಗಿ ಕನಿಷ್ಠ 10 ವರ್ಷದಿಂದ ಗರಿಷ್ಠ 20 ವರ್ಷ ಪೂರೈಸಿದ ವಿವಾಹಿತರಿಗಾಗಿ ‘ವೈವಾಹಿಕ ಫಲಪ್ರದಾಯಕ ಜೀವನ’ ಎಂಬ ಶಿಬಿರ ತಲ್ಲೂರು ಘಟಕದ ಕುಟುಂಬ ಆಯೋಗವು ಮಾರ್ಚ್ 17, 2024 ರಂದು ಭಾನುವಾರ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಹಾಲ್ನಲ್ಲಿ ಆಯೋಜಿಸಿತ್ತು.
ಬೆಳಗ್ಗೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೊದಲ ಭಾಗವಾಗಿ ಕಲ್ಯಾಣಪುರದ ಸೇಂಟ್ ಮಿಲಾಗ್ರೆಸ್ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕಿ ಹಿಲ್ಡಾ ಡಿಸಿಲ್ವಾ ನಡೆಸಿಕೊಟ್ಟರು, ಅವರು ಯಶಸ್ವಿ ಕುಟುಂಬ ಜೀವನದ ಅಗತ್ಯ ಅಂಶಗಳು ಮತ್ತು ಪರಸ್ಪರ ಗೌರವವನ್ನು ಪೋಷಿಸುವ ಮಹತ್ವದ ಕುರಿತು ಮಾತನಾಡಿದರು.
ಎರಡನೇ ಭಾಗದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಅರೋಜಾ ಅವರು ನಡೆಸಿಕೊಟ್ಟರು. ‘ನಮ್ಮ ಕುಟುಂಬ, ನಮ್ಮ ಜವಾಬ್ದಾರಿ’ ವಿಷಯದ ಕುರಿತು ಮಾತನಾಡಿದರು. ದಂಪತಿಗಳಿಗೆ ಸಾಮಾನ್ಯವಾಗಿ ಎದುರಾಗುವ ವಿವಿಧ ಕಹಿ ಅನುಭವಗಳನ್ನು ಅವರು ವಿವರಿಸಿದರು.
ತಲ್ಲೂರು ಚರ್ಚಿನ ಧರ್ಮಗುರು ವಂ.ಎಡ್ವಿನ್ ಡಿಸೋಜಾ ಸಮಾರೋಪದ ಅಂತ್ಯದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
Matrimonial Enrichment Camp at Kundapur Deanery Level in Tallur
Talluru, March 18: In accordance with the guidelines and agenda given by the Central Family Commission of Udupi Diocese, the seminar on “Marriage Enrichment Programme” exclusively for the benefit of married couples of Kundapura Deanery, who had completed minimum of 10 years to a maximum of 20 years of married life, was organised by the Family Commission of Tallur unit on Sunday, 17th of March 2024 at St. Francis of Assisi Church Hall.
The programme commenced at 9:30 a.m. with a prayer. The first session was conducted by Mrs. Hilda D’silva, retired Economics Lecturer at St. Milagres College, Kallianpur, who spoke on the essential aspects of a successful Family Life and the importance of nurturing mutual respect.
The second session was conducted by Mr. Leslie Arouza, Director of the Family Commission of Udupi Diocese. He spoke on the topic ‘Our Family, Our Responsibility’. He narrated various bitter experiences commonly encountered by the couples.
The day’s proceedings culminated with the Holy Mass celebrated by Rev. Fr. Edwin D’Souza. At the conclusion of the sessions, Rev. Fr. Edwin D’Souza expressed his gratitude to the resource persons as well as those who took part in the programme.