

ಕುಂದಾಪುರ:ಜು.14: ಮಣಿಪುರದಲ್ಲಿ ಎರಡುವರೆ ತಿಂಗಳ ಹಿಂದೆ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿ ಹಿಂಸೆ ನೀಡಿ ಅತ್ಯಾಚಾರ ವೆಸಗಿದ ಮ್ರಗೀಯ ಘಟನೆಗಾಗಿ, ಅಲ್ಲಿಯ ರಕ್ತಪಾತಕ್ಕಾಗಿ ಹಿಂಸೆಗಾಗಿ ಅಲ್ಲಿಯ ಆಸ್ತಿಪಾಸ್ತಿ ನಷ್ಟಕ್ಕಾಗಿ ಅಸಯಪಟ್ಟು ಮಣಿಪುರ ರಾಜ್ಯ ಮತ್ತು ಕೇಂದ್ರ ಸರಕಾರದ ಸೂಕ್ತ ಕ್ರಮ ತೆಗೆದುಕೊಳ್ಳದೆ ನಿರಂತರ ಗಲಭೆ ಕೊಲೆಗಳಿಗೆ ಕಾರಣವಾಗಿದ್ದಕ್ಕೆ ಕುಂದಾಪುರದಲ್ಲಿ ಸಮಾನ ಮನಸ್ಕರಿಂದ, ಸಹಬಾಳ್ವೆ, ಸಮುದಾಯ, ಕಥೊಲಿಕ್ ಸಭಾ, ಮಹಿಳಾ ಸಂಘಟನೆ – ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಕುಂದಾಪುರ ಇವರ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಂದಾಪುರ ವಲಯದ ಎಲ್ಲಾ ಕಡೆಗಳಿಂದ ಜಾತಿ ಭೇದ ಮರೆತು ಜನ ಸೇರಿ ಪ್ರತಿಭಟಿಸಿತು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿ ಮಾತನಾಡಿ ಮಣಿಪುರದಲ್ಲಿ ನಡೆದ ಘಟನೆ ದೇಶವೇ ತಲೆತಗ್ಗಿಸುವಂತಾಹದ್ದು. ಈ ಘಟನೆಯ ನಡೆದ ಮಾಹಿತಿ ಸ್ಥಳೀಯ ಪೆÇಲೀಸ್, ಸರ್ಕಾರಕ್ಕೆ ಗೊತ್ತಿದ್ದರೂ ಕ್ರಮ ಕೈಗೊಳ್ಳಲಿಲ್ಲ ‘ಮಣಿಪುರದ ಬುಡಕಟ್ಟು ಜನಾಂಗವೊಂದರ ಮೇಲೆ ಭಯಾನಕ ಕೌರ್ಯ ನಡೆದಿದೆ. ಮಹಿಳೆಯರನ್ನು ದೇವರು ಎನ್ನುವ ಬಿಜೆಪಿ ನೇತೃತ್ವದ ಸರ್ಕಾರ, ಪರಿವಾರ ಈ ಘಟನೆಯ ಬಗ್ಗೆ ಕಠಿಣ ನಿಲುವುಗಳನ್ನು ತಳೆಯದಿರುವುದರ ಹಿಂದೆ ಆನೇಕ ಕಾರಣಗಳು ಇವೆ. ಮಣಿಪುರ ಘರ್ಷಣೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮನೆಗಳನ್ನು ಸುಟ್ಟು ಹಾಕಿದರು. ಲೆಕ್ಕವಿಲ್ಲದಷ್ಟು ಚರ್ಚಗಳನ್ನು ನಾಶ ಮಾಡಿದರು. ಇದರಿಂದ ಸರ್ಕಾರಗಳ ವೈಫಲ್ಯ ಇಲ್ಲಿ ಸ್ಪಷ್ಟವಾಗುತ್ತದೆ’ ಎಂದರು. ಜೂಡಿತ್ ಮೆಂಡೊನ್ಸಾ ಮಾತನಾಡಿ “ಬಿಜೆಪಿ ಸರಕಾರ ಬೇಟಿ ಬಚಾವೊ ಬೇಟಿ ಪಡಾವೊ ಅಂತಾ ಹೇಳುತ್ತದೆ ಆದರೆ ವಾಸ್ತವವಾಗಿ ಮಹಿಳೆಯರಿಗೆ ಇವರಿಂದ ಯಾವ ಮರ್ಯಾದೆಯೂ ಇಲ್ಲ, ಬಿಜೆಪಿ ಆಡಳಿತ ಇರುವಲ್ಲಿ ಹೆಂಗಸರ ಮಾನಹರಣ ಮಾಡಿದಂತಹ ಘಟನೆಗಳಿಂದ ಇದು ಸಾಬಿತು ಆಗಿದೆ’ಎಂದರು.
ವಿಕಾಸ್ ಹೆಗ್ಡೆ ಮಾತನಾಡಿ ಇದು ಬಿಜೆಪಿ ಸರಕಾರದ ಕೃಪಾಪೋಷಿತ ಕುತಂತ್ರವಾಗಿದೆ, ಇದರಲ್ಲಿ ಪ್ರಧಾನ ಮಂತ್ರಿ ಮೌನ ವಹಿಸಿದ್ದು ನೋಡಿದರನೇ ತಿಳಿಯುತ್ತೆ. ಇಂದು ಬಿಜೆಪಿಯಿಂದಾಗಿ ದೇಶದಲ್ಲಿ 10 -15 ಸೇಕಡ ಜನರು ಇತರ ಧರ್ಮದವರ ವಿರುದ್ದ ವೈರತ್ವ ಸಾಧಿಸಿ ಗಲಭೆಗಳನ್ನು ಮಾಡುತ್ತಾರೆ, ಆದರೆ 85 ಸೇಕಡ ಹಿಂದು ಧರ್ಮದವರು ಅನ್ಯ ಧರ್ಮದವರ ಜೊತೆ ಅನ್ಯೋನೆತೆಯಿಂದ ಬಾಳುತ್ತಾರೆ, ನಾವು ಸಾಮರಸ್ಯದಲ್ಲಿ ಬದುಕುತ್ತೆವೆ, ಎನೇ ತೊಂದರೆ ಬಂದರು ಅನ್ಯ ಧರ್ಮದವರ ಜೊತೆ ನಾವಿದ್ದೆವೆ’ ಎಂದು ಹೇಳಿ ಧೈರ್ಯ ತುಂಬಿದರು. ಹುಸೇನ್ ಮತನಾಡಿ ‘ಅವರು ಗರ್ಭಿಣಿಯ ಹೊಟ್ಟೆಯನ್ನು ಬಗೆದು ಆ ಮಗುವನ್ನು ಸುಟ್ಟು ಹಾಕಿದರು, ಅದರ ಅಪರಾಧಿ ಯಾರೆಂದು ಇಂದಿಗೂ ಪತ್ತೆಯಾಗಲಿಲ್ಲ, ಇಂದು ಮಣಿಪುರದಲ್ಲಿ ಒಂದು ಜನಾಂಗದವರ ಮೇಲೆ ವಿಕ್ರತವಾದ ಕ್ರೌವ್ರ್ಯ ಎಸಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ, ಮುಂದಿನ ದಿನಗಳಲ್ಲಿ ಇಂತಹದಕ್ಕೆ ಆಸ್ಪದ ನೀಡದಿರಲು ಕೋಮುವಾದ ಪಕ್ಷಕ್ಕೆ ಮತ ನೀಡಬಾರದು’ ಎಂದರು. ಸಿಪಿಐ ಚಂದ್ರಶೇಖರ ಮಾತನಾಡಿ ‘ಮಣಿಪುರದ ಕುಕ್ಕಿ ಜನಾಂಗ ಬಹಳ ಕಾಡು, ಭೂಮಿ ಬೆಳೆಗಳಿಂದ ಸಮ್ರದ್ದಿಯಾಗಿದೆ, ಇದು ಬಹು ಸಂಖ್ಯಾಕ ಜನರಿಗೆ ಅಸೂಯೆ, ಇವರು ಕುಕ್ಕಿ ಜನರಿಗೆತೊಂದರೆಕೊಡಲು ಬಿಜೆಪಿಯೇ ಕುಮ್ಮಕ್ಕು ನೀಡಿದೆ’ ಎಂದು ಅಲ್ಲಿಯ ವಾಸ್ತಾವ್ಯಂಶ ತಿಳಿಸಿದರು.
ಪ್ರತಿಭಟನೆಯಲ್ಲಿ ಕ್ಯಾಂಡಲ್ ಬೆಳಗಿ ಹಿಂಸಾಚಾರದಲ್ಲಿ ಮ್ರತ ಹೊಂದಿದವರಿಗೆ ಶ್ರದ್ದಾಂಜಲಿ ಅರ್ಪಿಅಸಲಾಯಿತು. ಪ್ರತಿಭಟನೆಯಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊ ಅವರ ಉಪಸ್ಥಿತಿಯಲ್ಲಿ ವಲಯದ ಎಲ್ಲ ಕ್ರೈಸ್ತ ಧರ್ಮಗುರುಗಳು, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳು, ಹಲವಾರು ಧರ್ಮಭಗಿನಿಯರು, ಸಹಬಾಳ್ವೆಯ ಸಂಚಾಲಕ ರಫೀಕ್, ಮಂಜು ಕಾಳಾವರ, ರಫಿಕ್ ಸಹಬಾಳ್ವೆ, ದಲಿತ ಸಂಘರ್ಷ ತಾಲೂಕು ಸಮಿತಿ ಅಧ್ಯಕ್ಶ ಮಂಜುನಾಥ ಗಿಳಿಯಾರ್, ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಮಾನವ ಬಂಧುತ್ವ ವೇದಿಕೆ ಕುಂದಾಪುರ ಘಟಕದ ಸಂಚಾಲಕ ಬರ್ನಾಡ್ ಡಿಕೋಸ್ತಾ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಸಿಪಿಎಮ್ ಅಧ್ಯಕ್ಷರಾದ ಹೆಚ್ ನರಸಿಂಹ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಬ್ಬು ಅಹ್ಮದ್, ಅಶ್ಬಕ್. ಕಾಂಗ್ರೆಸಿನ ಚಂದ್ರ ಅಮೀನ್, ಆಶಾ ಕರ್ವಾಲ್ಲೊ, ಕೇಶವ್ ಭಟ್, ರೋಶನ್ ಶೆಟ್ಟಿ, ರೇವತಿ ಶೆಟ್ಟಿ, ಗಂಗಾಧರ್ ಶೆಟ್ಟಿ, ಅಭಿಜಿತ್ ಪೂಜಾರಿ, ಗಣೇಶ್ ಶೇರೆಗಾರ್, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ಕುಮಾರ್ ಖಾರ್ವಿ, ಜ್ಯೋತಿ, ಹಾರೋನ್ ಸಾಹೇಬ್, ಅಶೋಕ್ ಸುವರ್ಣ, ರೋಶನ್ ಬರೆಟ್ಟೊ, ಮುನಾಫ್, ಶಾಲೆಟ್ ರೆಬೆಲ್ಲೊ, ಯಾಸಿನ್ ಹೆಮ್ಮಾಡಿ, ಶಾಂತಿ ಪಿರೇರಾ, ಅಬ್ದುಲ್ಲಾ ಕೋಡಿ, ಶಿವಕುಮಾರ್ ಸಮುದಾಯ ಅಧ್ಯಕ್ಷರಾದ ಸದಾನಂದ ಬೈಂದೂರು, ಸದಸ್ಯರಾದ ಉದಯ್ ಗಾಂವ್ಕರ್, ವಾಸುದೇವ ಗಂಗೇರ್, ಬಾಲಕ್ರಷ್ಣ ಮುಂತಾದ ಪ್ರಮುಖರು ಹಾಜರಿದ್ದರು.
ಸಹಬಾಳ್ವೆ ಕುಂದಾಪುರದ ಸಂಚಾಲಕರಾದ ವಿನೋದ್‍ಕ್ರಾಸ್ಟೊ ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ನೀಡಿದರು.


































