ಶ್ರೀನಿವಾಸಪುರ ರಥಸಪ್ತಮಿ ದಿನ ಸೂರ್ಯಾಸ್ತಮ ಮುನ್ನ ಮಾಘ ಸ್ನಾನ ಮಾಡಿ 108 ಸೂರ್ಯ ನಮಸ್ಕಾರ ಮಾಡಿ ಸಪ್ತಾಶ್ವರೂಡ ಅರುಣ ಸೂರ್ಯ ದರ್ಶನ ಪಡೆದರೆ ಮನುಷ್ಯನಿಗೆ ಕಾಯಿಲೆಗಳು ದೂರವಾಗಿ ಮಾನಸಿಕ ದೈಹಿಕ ಸಮತೋಲನ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಶಿಕ್ಷಣ ಪ್ರಮುಖ ಚೌಡಪ್ಪ ಹೇಳಿದರು.
ಇಲ್ಲಿನ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥ ಸಪ್ತಮಿ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಮತ್ತು ರಥಸಪ್ತಮಿ ಮಹತ್ವ ತಿಳಿಸಿದರು.
ಮಹರ್ಷಿ ಕಷ್ಯಪ-ಆದಿತಿ ದಂಪತಿಗಳ ಪುತ್ರನಾಗಿ ಜನಿಸಿದ ದಿನ ಸೂರ್ಯ ದೇವನ ಹಬ್ಬವಾಗಿದೆ. ಸಂಕ್ರಾಂತಿಗೆ ದಕ್ಷಿಣಾಯನದಿಂದ ಉತ್ತರಾಯಣ ಕಡೆ ಪ್ರಯಾಣ ಪ್ರಾರಂಬಿಸಿ ರಥಸಪ್ತಮಿ ದಿನ ಸಂಪೂರ್ಣ ಉತ್ತರ ದಿಕ್ಕಿಗೆ ತಿರುಗುತ್ತಾನೆ. ಈ ದಿನ ಪತ ಸಂಚಲನ ಬದಲಾವಣೆ ಮಾಡಿದಾಗ ಪರಿಸರಲ್ಲಿ ಸೂರ್ಯನ ಶಾಖ ಹೆಚ್ಚಾಗಿ ಮರಗಿಡ ಸಸ್ಯ ಸ್ಯಾಮಲ ಮೇಲೆ ಪ್ರಭಾವ ಬೀರಿ ಪ್ರಕೃತಿಯಲ್ಲಿ ಉಷ್ಣತೆ ಹೆಚ್ಚಾಗಿ ಬರುವಂತಹ ದೈಹಿಕ ಕಾಯಿಲೆ ಮತ್ತು ಹಿಂದಿನ ಜನ್ಮದ ಪಾಪ ದೂರವಾಗುತ್ತವೆ. ದೇಹಕ್ಕೆ ರೋಗ ನಿರೂದಕ ಶಕ್ತಿ ತುಂಬಿ ಆರೋಗ್ಯವಾಗಿರಲು ತಲೆ ಮೇಲೆ ಅಕ್ಷತೆ ಕಾಳು ಎಕ್ಕದ ಎಳೆ, ತಲೆ, ಭೂಜ, ಮಂಡಿ, ಪಾದಗಳ ಮೇಲೆ ಬಿಳಿ ಎಕ್ಕದ 7 ಎಳೆಗಳು ಇಟ್ಟುಕೊಂಡು ಸ್ಥಾನ ಮಾಡಿ ನಂತರ ಪಾಪ ಮುಕ್ತಿಗೆ ಸೂರ್ಯನಿಗೆ ಭೊಗಸೆಯಲ್ಲಿ ಆಘ್ರ್ಯೂ 3 ಬಾರಿ ಅರ್ಪಿಸಿ ದೇವರನ್ನು ಪ್ರಾರ್ಥಿಸಿ 108 ಬೀಜಮಂತ್ರ ಘೋಷಗಳೊಂದಿಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೈಹಿಕ ಮಾನಸಿ ಶಕ್ತಿ ಮತ್ತು ವಸುದೈವ ಕುಟುಂಬಕ್ಕಂ ಪದ್ದತಿ ವೃದ್ಧಿಯಾಗಿ ನೆಮ್ಮದಿ ದೊರೆಯುತ್ತದೆ.
ದೇವತೆಗೆಳಿಗೆ 6 ತಿಂಗಳ ವಿಶ್ರಾಂತಿ 6 ತಿಂಗಳು ಕ್ರೀಯಾಶೀಲವಾಗಿರುವುದು ಆದ್ಯಾತ್ಮಿಕ ಪರಂಪರೆ ಹೇಳುತ್ತದೆ. ಸೂರ್ಯನ ಪುತ್ರ ಶೆನೈಶ್ವರ, ಯಮ ಸೇರಿದಂತೆ ವಿಶ್ರಾಂತಿ ಮುಗಿಸದ ನೂರಾರು ದೇವತೆಗಳು ಸೂರ್ಯ ಪತ ಸಂಚಲನಕ್ಕೆ ಸಾಕ್ಷೀಭೂತರಾಗಿರುತ್ತಾರೆಂದು ಪ್ರಕೃತಿ ಪರಂಪರೆ ಸಾರುತ್ತಿದೆ. ರಾಮಾಯನ ಮಹಾ ಭಾರತದಲ್ಲಿ ಉಲ್ಲೇಕಿಸಲಾಗಿದೆ.
ವಿಷ್ಣು ತುಳಸಿ ಪ್ರಿಯಾ. ಸೂರ್ಯ ಎಕ್ಕ ಮತ್ತು ನಮಸ್ಕಾರ ಪ್ರಿಯಾನಾಗಿರುವುದರಿಂದ ದೇಹ ಶಾಖ ಬರಿಸಿ ಸಾತ್ವಿಕತೆ ಪಡೆದುಕೊಂಡು ನಮ್ಮಲ್ಲಿನ ಕೋಪ ಕ್ಷೀಣಿಸುತ್ತದೆ. ಇಂದು ಗೋಧಾನ ಮತ್ತು ಕುಂಬಳ ಕಾಯಿ ಎಳ್ಳು ಧಾನ ಮಾಡಿದರೆ ಏಳು ಜನ್ಮಗಳ ಪಾಪ ಮುಕ್ತರಾಗಿ ಸಾರ್ಥಕತೆ ಬರುತ್ತದೆ ಎನ್ನುವುದು ಇತಿಹಾಸ ಹೇಳುತ್ತದೆ ಎಮದರು. ಶಿಕ್ಷಕಿ ಎನ್.ಜಿ.ವರಲಕ್ಷ್ಮಮ್ಮ, ನಾಗೇಂದ್ರ ಪ್ರಕಾಶ್, ಉಮಾದೇವಿ, ಸುಜಾತ, ಲಕ್ಷ್ಮಿ ಹಾಜರಿದ್ದರು.