ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ : – ಕೋವಿಡ್ ಮುಕ್ತ ಶಾಲೆಗಾಗಿ ಪ್ರತಿ ವಿದ್ಯಾರ್ಥಿಯೂ ಮಾಸ್ಕ್ ಧರಿಸಿ , ಸಾಮಾಜಿಕ ಅಂತರ ಕಾಪಾಡಿ , ಸ್ವಚ್ಛತೆಗೆ ಒತ್ತು ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಕರೆ ನೀಡಿದರು . ತಾಲ್ಲೂಕಿನ ಅರಾಬಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡುತ್ತಿದ್ದರು . ಕೋವಿಡ್ ಹೆಮಾರಿಯಾಗಿ ಪ್ರಪಂಚವನ್ನು ಕಾಡಿದೆ , ಮಕ್ಕಳು ಕಲಿಕೆಯಿಂದ ದೂರವಾಗಲೂ ಕಾರಣವಾಗಿದೆ . ಆನ್ಲೈನ್ ಕ್ಲಾಸ್ಗಳಿಂದ ಮಕ್ಕಳ ಕಲಿಕೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂಬ ಕಾರಣದಿಂದ ಇದೀಗ ಶಾಲೆಗಳ ಭೌತಿಕ ತರಗತಿ ತೆರೆಯಲಾಗಿದೆ ಎಂದರು . ಪ್ರೌಢಶಾಲೆಗಳ ೯ ಮತ್ತು ೧೦ ನೇ ತರಗತಿ ವಿದ್ಯಾರ್ಥಿಗಳು ಕೋಎಡ್ ಮಾರ್ಗಸೂಚಿಯಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಕೋಡ್ಗೆ ಸಡ್ಡು ಹೊಡೆದು ಕೋವಿಡ್ . ಮುಕ ಶಾಲೆಯಾಗಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ೧ ರಿಂದ ೮ ನೇ ತರಗತಿ ಮಕ್ಕಳಿಗೂ ಧೈರ್ಯದಿಂದ ಶಾಲೆ ಆರಂಭಿಸಲು ಸಹಕಾರಿಯಾಗಲಿದೆ ಎಂದರು . ಹೊಸ ಪಠ್ಯಪುಸ್ತಕಗಳ ಸರಬರಾಜಿಗೆ ಇಲಾಖೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತಿದೆ . ಅದುವರೆಗೂ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಪ್ರತಿ ಶಾಲೆಯಲ್ಲಿ ಬುಕ್ ಬ್ಯಾಂಕ್ ಮಾಡಿದ್ದು , ಹಳೆಯ ಪುಸ್ತಕಗಳನ್ನು ನೀಡಿ ಕಲಿಕೆ ಮುಂದುವರೆಸಲಾಗಿದೆ ಎಂದರು . ಆರಾಧಿ ಕೊತ್ತನೂರು ಪೌಢಶಾಲೆ ಜಿಲ್ಲೆಯಲ್ಲಿ ಮಾದರಿ ಶಾಲೆಗಳ ಪಟ್ಟಿಯಲ್ಲಿದೆ . ಇಲ್ಲಿನ ಕಂಪ್ಯೂಟರ್ ಲ್ಯಾಬ್ ವಿಜ್ಞಾನ ಪ್ರಯೋಗಾಲಯ , ಸುಂದರ ಪರಿಸರ ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಅಭಿನಂದಿಸಿದರು .