ಕುಂದಾಪುರ, ಅ.5,: ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಅ.4 ರಂದು ಚರ್ಚಿನ ಕುಟುಂಬ ಆಯೋಗದಿಂದ ಭಾನುವಾರ ವಿವಾಹಿತ ದಂಪತಿಗಳ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನವನ್ನು ಅರ್ಪಿಸಿ ವಿವಾಹಿತ ದಂಪತಿಗಳು ಹೇಗೆ ಜೀವಿಸಬೇಕು, ಅವರ ಕರ್ತವ್ಯಗಳನ್ನು ಎನೆಂಬುದನ್ನು ತಿಳಿಸಿ ಸಂದೇಶ ನೀಡಿ ಶುಭ ಹಾರೈಸಿದರು.
ಪವಿತ್ರ ಬಲಿದಾನದ ನಂತರ ನಡುವೆ ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರದಾರ ಲೆಸ್ಲಿ ಆರೋಜಾ, ವಿವಾಹಿತ ದಂಪತಿಗಳ ಜೀವನದ ಮೇಲೆ ಬೆಳಕು ಚೆಲ್ಲಿದರು. ಸುಮಾರು 125 ವಿವಾಹಿತ ದಂಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಲ್ಲಾ ದಂಪತಿಗಳು ನವ ವರ ವಧುವಿನಂತೆ, ಪೋಷಾಕುಗಳನ್ನು ಧರಿಸಿಕೊಂಡು,ಮಹಿಳೆಯರು ಹೂವು ಮುಡಿದು ದಾರೆಯ ಸೀರೆಗಳಗಳನ್ನು ಉಟ್ಟುಕೊಂಡು ಶ್ರಂಗರಿಸಿಕೊಂಡು ಬಂದಿದ್ದರು. ಕುಟುಂಬ ಆಯೋಗದ ಸದಸ್ಯರು ಪವಿತ್ರ ಬಲಿದಾನದ ಪ್ರಾರ್ಥನ ವಿಧಿವಿಧಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಚರ್ಚಿನ ಕುಟುಂಬ ಆಯೋಗದ ಸಂಚಾಲಕಿ ಜೂಲಿಯಾನ ಮಿನೇಜೆಸ್ ಸ್ವಾಗತಿಸಿದರು, ಇದೇ ಸಂದರ್ಭದಲ್ಲಿ ಯಾಜಕರ ಪಾಲಕ ಸಂತ ಮರಿಯಾ ವಿಯಾನ್ನಿಯ ಹಬ್ಬದ ಪರವಾಗಿ ಪಾಲನಮಂಡಳಿ ಉಪಾಧ್ಯಕ್ಷ ಶಾಲೆಟ್ ರೆಬೆಲ್ಲೊ ವಂ.ಪಾವ್ಲ್ ರೇಗೊ ಅವರಿಗೆ ಹೂ ಗುಚ್ಚ ನೀಡಿ ಶುಭಾಶಯ ಕೋರಿದರು.ವಂ| ಪಾವ್ಲ್ ರೇಗೊ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಅವರಿಗೆ ಶುಭ ಕೋರಿದರು. ಚರ್ಚಿನ ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಮತ್ತು ಪಾಲನಮಂಡಳಿ ಕಾರ್ಯದರ್ಶಿ ಪಾಲನಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನೆರೆದಿದ್ದ ಎಲ್ಲರಿಗೂ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.