

ಕುಂದಾಪುರ : ಮಾರ್ಕೆಟ್ ಬಾಯ್ಸ್ ಕುಂದಾಪುರ ಇವರ ಆಶ್ರಯದಲ್ಲಿ 77ನೇ ಸ್ವಾತಂತ್ರ ದಿನಾಚರಣೆಯನ್ನು ಫಿಶ್ ಮಾರ್ಕೆಟ್ ರಸ್ತೆ , ಕುಂದಾಪುರದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿ ಆಗಿ ಆಗಮಿಸಿದ ಸಿಟಿ ಜೆಸಿಐ ಕುಂದಾಪುರ ಇದರ ಅಧ್ಯಕ್ಷೆಯಾದ ಡಾಕ್ಟರ್ ಸೋನಿ ಡಿಕೋಸ್ತ ಧ್ವಜಾರೋಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನ ಮಡಿದ ವೀರ ಯೋಧರನ್ನು ಸ್ಮರಿಸಲಾಯಿತು. ಸ್ವತಂತ್ರ ಭಾರತದಲ್ಲಿ ಯುವಕರ ಜವಾಬ್ದಾರಿ ಕುರಿತು ಮಾತನಾಡಿದರು. ಸ್ವತಂತ್ರ ದಿನಾಚರಣೆಯನ್ನು ಅಚ್ಚು ಕಟ್ಟಾಗಿ ಆಚರಣೆ ಮಾಡುತ್ತಿರುವ ಮಾರ್ಕೆಟ್ ಬಾಯ್ಸ್ ನ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು.ಈ ಸಂದರ್ಭಲ್ಲಿ ಆಗಮಿಸಿದ ಎಲ್ಲ ಸಾರ್ವಜನಿಕರಿಗೆ ಸಿಹಿ ಹಂಚುದರ ಮೂಲಕ ಸಂಭ್ರಮಿಸಲಾಯಿತು ಮಾರ್ಕೆಟ್ ಬಾಯ್ಸ್ ಕಾರ್ಯದರ್ಶಿ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷರಾದ ನಟೇಶ್ ಮುಖ್ಯ ಅತಿಥಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.



