

ಗಂಗೊಳ್ಳಿ: ಪೊಲೀಸ್ ಅಧೀಕ್ಷಕರು ಉಡುಪಿ. ಜಿಲ್ಲೆ ಇವರು ನೀಡಿರುವ ವರದಿಯಂತೆ. ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದ ಖಾರ್ವಿಕೇರಿಯ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದ ಮಾರಿ ಜಾತ್ರೆ ಸಮಯದಲ್ಲಿ ಮದ್ಯಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಮಾಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉಡುಪಿ ಜಿಲ್ಲ್ಲಾಧಿಕಾರಿ ಕೂರ್ಮಾ ರಾವ್.ಎಂ. ಭಾ.ಆ.ಸೇ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಲ್ಲಾ ರೀತಿಯ ನಿಯಮಗಳು 1968 ರ ನಿಯಮ 3 ರಡಿ ಮದ್ಯ ಮಾರಾಟವನ್ನು ನಿಷೇಧಿದಿಸಿದ್ದಾರೆ