ಕುಂದಾಪುರ: ದಿ. 11-01-2024 ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪವಿಭಾಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡುವದರ ಮೂಲಕವಾಗಿ HIV, Syphilis, Hepatitis B ಕುರಿತು ಜಾಗೃತಿ ಮೂಡಿಸಿ ಗರ್ಭಿಣಿಯರಿಗೆ ಎಲ್ಲ ರೀತಿಯ ಆರೋಗ್ಯ ತಪಾಸಣೆ & ಪರೀಕ್ಷೆಗಳನ್ನು ಮಾಡಲಾಯಿತು. ಈ ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಸಕರಾದ ಡಾ. ರಾಬರ್ಟ್ ರೆಬೆಲ್ಲೋ, ತಾಲೂಕು ಆರೋಗ್ಯಾಧಿಕಾರಿಯವರಾದ ಡಾ. ಪ್ರೇಮಾನಂದ್, ಆಸ್ಪತ್ರೆಯ (ಪ್ರಭಾರ)ಶುಶ್ರುಷ ಅಧಿಕ್ಷಕರಾದ ಶ್ರೀಮತಿ ಅನ್ನಪೂರ್ಣ ಟಿ.ಆರ್ ಮತ್ತು ಆಸ್ಪತ್ರೆಯ ಇತರೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಜರಾಗಿದ್ದರು. ಶ್ರೀಮತಿ ನಳಿನಾಕ್ಷಿ ಐಸಿಟಿಸಿ ಆಪ್ತಸಮಾಲೋಚಕರು ಮತ್ತು ಶ್ರೀಮತಿ ಪ್ರತಿಮಾ ಐಸಿಟಿಸಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಆಸ್ಪತ್ರೆ ಎಲ್ಲಾ ಸಿಬ್ಬಂದಿಯವರು ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ 45 ಗರ್ಭಿಣಿಯರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.