ಶ್ರೀನಿವಾಸಪುರ 1 : ನಮ್ಮ ದೇಶದಲ್ಲಿ ಬಡುಕುಟುಂಬಗಳ ಏಳಿಗಾಗಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ವಿಕಸಿತ ಭಾರತ್ ಸಂಕಲ್ಪ ಯಾತ್ರೆಯ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರದರ್ಶಿಸುತ್ತಿದೆ. ದೇಶದಲ್ಲಿ ಎಲ್ಲರೂ ಸಹ ನನ್ನ ಕುಟುಂಬವೇ ಎನ್ನುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ರಾಯಲ್ಪಾಡಿನ ಗ್ರಾಮಪಂಚಾಯತಿ ಆವರಣದ ಮುಂಭಾಗ ಮಂಗಳವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಂದ್ರ ಮೋದಿರವರು ಒಂದು ದಿನವೂ ಸಹ ರಜಾ ಹಾಕಿಲ್ಲ. ದೇಶವನ್ನು ಪ್ರಪಂಚದಲ್ಲಿಯೇ ನಂಬರ್ ಒನ್ ದೇಶವನ್ನ ಮಾಡಬೇಕೆನ್ನುವ ಉದ್ದೇಶದಿಂದ ಹಗಲಿರಲು ದುಡಿಯುತ್ತಿದ್ದು, ನಿಮ್ಮ ಆರ್ಶೀವಾದದೊಂದಿಗೆ ಮೂರನೇ ಭಾರಿಯೂ ನರೇಂದ್ರ ಮೋದಿರವರು ಪ್ರಧಾನ ಮಂತ್ರಿ ಆಗಲಿದ್ದಾರೆ
ದೇಶದಲ್ಲಿ 140 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ದೇಶದಲ್ಲಿನ ಪ್ರತಿಯೊಂದು ಕುಟುಂಬವು ನನ್ನ ಕುಟುಂಬ. ಯಾರು ಹಸಿವಿನಿಂದ ಬಳಲಬಾರದೆಂಬ ಸದುದ್ದೇಶದಿಂದ ಪ್ರಧಾನ ಮಂತ್ರಿ ಕರೀಬ್ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕುಟುಂಬದ ಒಬ್ಬರಿಗೆ 10 ಕೆಜಿ ಪ್ರಕಾರವಾಗಿ 32 ತಿಂಗಳು ಉಚಿತವಾಗಿ ನೀಡಿದರು . ಇಂದು ನಮ್ಮ ರಾಜ್ಯದಲ್ಲಿ 5 ಕೆಜಿ ಅಕ್ಕಿ ನೀಡುತ್ತಿರುವುದು ಸಿದ್ದರಾಮಯ್ಯ ಅವರು ಅಲ್ಲ , ಕೇಂದ್ರ ಸರ್ಕಾರವೇ .
ಆಯುಷ್ ಮಾನ್ ಯೋಜನೆಗಳ ಮೂಲಕ ಅನೇಕ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಆಯುಷ್ಮಾನ್ ಗುರುತಿನ ಚೀಟಿಯನ್ನು ತೋರಿಸಿ ಉಚಿತವಾಗಿ ತಪಾಸಣೆ ಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಎಂದರು.
ಕೇಂದ್ರ ಸರ್ಕಾರವು ಪಕ್ಷತೀತವಾಗಿ ಗ್ರಾಮೀಣ ಭಾಗದಲ್ಲಿ ಗ್ರಾ.ಪಂ ಮೂಲಕ ಶೌಚಾಲಯಗಳನ್ನು , ಉಚಿತ ಗ್ಯಾಸ್ ಸಿಲೆಂಡರ್ಗಳನ್ನು ನೀಡಿದೆ . ದೇಶದ ಜನರಿಗೆ ಕೇಂದ್ರ ಸರ್ಕಾರ ವತಿಯಿಂದ ನೀಡಲಾದ ಅನೇಕ ಕೇಂದ್ರ ಸರ್ಕಾದ ಗ್ಯಾರಂಟಿ ಯೋಜನೆಗಳನ್ನ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದರು . ಹಳ್ಳಿಕಡೆ ರಥ ಯಾತ್ರೆಯು ಬಂದರೆ ಈ ರಥ ಯಾತ್ರೆಯನ್ನು ಮೋದಿ ಗ್ಯಾರಂಟಿ ರಥ ಯಾತ್ರೆ ಎಂದು ಕರೆಯುತ್ತಾರೆ ಎನ್ನುತ್ತಾರೆ ಗ್ರಾಮೀಣ ಭಾಗದ ಸಾರ್ವಜನಿಕರು.
ಕೇಂದ್ರ ಸರ್ಕಾರದ ಗ್ಯಾರಂಟಿಗಳು , .ರಾಜ್ಯ ಸರ್ಕಾರದ ಗ್ಯಾರಂಟಿ ತರ ಅಲ್ಲ ಕೇಂದ್ರ ಸರ್ಕಾರವು ಏನೇನು ದೇಶದ ಜನರಿಗೆ ಯೋಜನೆಗಳನ್ನ ಮಾಡಿದೆ ಎಂಬುದನ್ನ ತೋರಿಸುವದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮುಖ್ಯ ಉದ್ದೇಶ ಇದೇ ಸಮಯದಲ್ಲಿ ಟಿವಿ ಪರದೆಯ ಮೇಲೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನ ಪ್ರದರ್ಶಿಸಲಾಯಿತು.
ವಿಕಸಿತ ಭಾರತ್ ಸಂಕಲ್ಪಯಾತ್ರೆಯು ಮುದಿಮಡುಗು ಗ್ರಾಮಪಂಚಾಯಿತಿ ಬಳಿ ನಡೆಯಿತು. ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲರೆಡ್ಡಿ, ಗ್ರಾ.ಪಂ ಉಪಾಧ್ಯಕ್ಷ ಕನ್ನಯ್ಯ, ಪಿಡಿಒ ಎನ್.ನರೇಂದ್ರಬಾಬು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಕೆ.ಸಂತೋಷ್, ಪಶುವೈದ್ಯಾಧಿಕಾರಿ ವೆಂಕಟಶಿವಾರೆಡ್ಡಿ, ಅಂಚೆ ಇಲಾಖಾಧಿಕಾರಿ ಸಾಯಿ ಹೇಂಂತ್, ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಸಂದೀಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ನವೀನ್ಕುಮಾರ್, ಆರ್ಥಿಕ ಸಾಕ್ಷರತಾ ಕೇಂದ್ರ ತಾಲ್ಲೂಕು ಸಂಯೋಜಕರಾದ ಜಿ.ವೆಂಕಟೇಶ್, ಪಿ.ರಾಮಚಂದ್ರ, ಮುಖಂಡರಾದ ರೋಣೂರು ಚಂದ್ರಶೇಖರ್, ನರಸಿಂಹನಾಯಕ್, ಶಶಿಧರರೆಡ್ಡಿ, ರಾಜು, ಜಯಮ್ಮ, ಶಿಕ್ಷಕರಾದ ಮಂಜೇಶ್, ಬಾಬು ಇದ್ದರು.