ಶ್ರೀನಿವಾಸಪುರ : ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಮಾಡಬೇಕೆನ್ನುವ ಉದ್ದೇಶದಿಂದ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ದುಶ್ಪರಿಣಾಮಗಳ ಬಗ್ಗೆ ಅರಿವು ಕಡಿಮೆ ಇದ್ದು ಇದರಿಂದ ನಾವು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವತಿಯಿಂದ ಪ್ಲಾಸ್ಟಿಕ್ ನಿಷೇಧ ಮತ್ತು ಹವಾಮಾನ ಬದಲಾವಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮಾನ್ಯವಾಗಿ ಸಾರ್ವಜನಿಕರು ಹಾಲಿನ ಪಾಕೆಟ್, ಶ್ಯಾಮ್ಪೂ ಪಾಕೆಟ್ ಸ್ವಲ್ಪಕಟ್ ಮಾಡಿ ಆಚೆ ಹಾಕುತ್ತಾರೆ ಆದರೆ ಅವುಗಳು ಭೂಮಿಗೆ ಸೇರುವುದರಿಂದ ಅವುಗಳಿಂದ ಭೂಮಿಯು ನೀರನ್ನು ಹೀರಿಕೊಳ್ಳುವುದು ಕಷ್ಟ .ಇದನ್ನ ಅರಿತು ಆದ್ದರಿಂದ ಸಾರ್ವಜನಿಕರು ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಸಹಕರಿಸಬೇಕು ಎಂದರು.
ಶಾಲೆಯನ್ನು ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿಸುವ ಉದ್ದೇಶದಿಂದ ಶಾಲೆ ಶಿಕ್ಷಕ ವೃಂದವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು.
ಎಂಪ್ರಿ(ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ) ಸಂಸ್ಥೆಯ ಮುಖ್ಯಸ್ಥೆ ಲತಾ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಪರಿಸರದಲ್ಲಿ ಮಾರಕವಾಗುತ್ತಿದ್ದು, ಪ್ರತಿಯೊಬ್ಬರು ನಮ್ಮ ಮಕ್ಕಳಿಗೆ ಆಸ್ತಿ, ಅಂತಸ್ತಿನೊಂದಿಗೆ ಶುದ್ಧವಾದ ಪರಿಸರವನ್ನು ನಿರ್ಮಿಸಿಕೊಡಬೇಕಾಗಿದೆ. ಮುಂದಿನ ಪೀಳಿಗೆಗೆ ಶುದ್ಧವಾದ ಪರಿಸರವನ್ನು ಕೊಡುಗೆಯಾಗಿ ನಮ್ಮೆಲ್ಲರ ಕರ್ತವ್ಯವಾಗಬೇಕು.
ಮನುಷ್ಯನ ಸ್ವಾರ್ಥಕ್ಕೆ ಪರಿಸರವು ವಿನಾಶದ ಅಂಚಿಗೆ ಹೋಗುತ್ತಿದೆ. ಮಕ್ಕಳು ಪರಿಸರದ ಪ್ರಜ್ಞೆಯನ್ನು ಮೂಡಿಸಿಕೊಂಡು ಎಲ್ಲಿ , ಎಲ್ಲಿ ಪರಿಸರ ಧಬ್ಬಾಳಿಕೆ ನಡೆಯುತ್ತಿದೆ . ಅಲ್ಲಿ ಪರಿಸರವನ್ನು ಉಳಿಸುವ ಕಾರ್ಯಕ್ಕೆ ಸೈನ್ಯಿಕರಂತೆ ಕಟ್ಟುಬದ್ಧರಾಗಿ ಮುಂದಾಗಬೇಕು. ಪ್ಲಾಸ್ಟಿಕ್ನ್ನು ಬಳಸುವುದನ್ನ ಕಟ್ಟುನಿಟ್ಟಾಗಿ ನಿಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ .
ಎಂಪ್ರಿ ಸಂಸ್ಥೆಯು ರಾಜ್ಯದಲ್ಲಿ ಶಾಲಾ ಮಕ್ಕಳನ್ನು ಯಾಕೆ ಆಯ್ಕೆ ಮಾಡಿಕೊಳ್ಳುತ್ತಿದೆ ಅಂದರೆ ಈವತ್ತಿನ ಮಕ್ಕಳೇ ದೇಶದ ಆಸ್ತಿ. ಅವರಿಗೆ ಪರಿಸರ ಜಾಗೃತಿ ಮೂಡಿಸುವುದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಇದರಿಂದ ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಶಾಲೆಗಳ ಮೂಲಕ ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಉದ್ದೇಶವನ್ನು ಎಂಪ್ರಿ ಸಂಸ್ಥೆ ಹಮ್ಮಿಕೊಂಡಿದ್ದು, ಶಾಲಾ ಮಕ್ಕಳು ತಮ್ಮ ತಮ್ಮ ಮನೆಗಳಿಗೆ ಹೋಗಿ ಅಲ್ಲಿಯೂ ಸಹ ಪರಿಸರವನ್ನು ಉಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಮಾಡಲಲ್ಲಿವೆಂದರೆ ಆರೋಗ್ಯದ ಮೇಲೆ ಅನೇಕ ಪರಿಣಾಮ ಬೀರಲಿದ್ದು, ಪರಿಸರವನ್ನು ನಾಶಪಡಿಸುವುದರಿಂದ ವಿನಾಶದ ಅಂಚಿಗೆ ಈ ಸಮಾಜ ಬರಲಾಗುವುದು ಎಂದು ಎಚ್ಚರಿಕೆ ನೀಡಿದರು. ಅದಕ್ಕೆ ಪರಿಸರವನ್ನು ಉಳಿಸುವ ಕಾರ್ಯಗಳು ಏನು ಇದೆ ಅವುಗಳನ್ನ ಕಾರ್ಯರೂಪಕ್ಕೆ ತರುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಸಲಹೆ ನೀಡಿದರು .
ಎಂಪ್ರಿ ಸಂಸ್ಥೆಯ ಸದಸ್ಯೆ ಜಗದಾಂಭಿಕ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್, ಪುರಸಭೆ ಆರೋಗ್ಯ ಅಧಿಕಾರಿ ಕೆ.ಜೆ.ರಮೇಶ್, ಡಿಸಿಸಿ ಬ್ಯಾಂಕ್ ನಿರ್ಧೇಶಕ ಭಾಸ್ಕರ್, ಮುಖಂಡ ಗೊಲ್ಲಪಲ್ಲಿ ಪ್ರಸನ್ನ, ಶಿಕ್ಷಕರಾದ ವಿಜಯಮ್ಮ, ಶಶಿಕಳಾ, ಶ್ರೀದೇವಿ, ನೀಲಾವತಿ, ಗೌರಮ್ಮ, ರೆಡ್ಡಮ್ಮ, ಗೀತಾಂಜಿಲಿ, ಗೀತಶ್ರೀ, ಗುಣಶ್ರೀ, ವಂದನ, ನಾಗರಾಜ್, ನಾರಾಯಣಸ್ವಾಮಿ, ರಾಮಚಂದ್ರಪ್ಪ ಇದ್ದರು.