

ಕೋಲಾರ,ಡಿ.13: ಬೆಂಗಳೂರಿನ ಎಚ್.ಎಂ.ಟಿ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೋಲಾರ ಜಿಲ್ಲೆಯ ಜಪಾನ್ ಶಿಟೋರಿಯೋ ಕರಾಟೆ ಶಾಲೆಯ ವಿದ್ಯಾರ್ಥಿಗಳು ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿರುತ್ತಾರೆ.
ಕೋಲಾರ ನಗರದ ವಿದ್ಯಾ ಜ್ಯೋತಿ ಶಾಲೆಯ ದೇವಿ ಶ್ರೀ ಭಾರ್ಗವ್, ರ್ಯಾಕ್ ವ್ಯಾಲ್ಯೂ ಇಂಟರ್ ನ್ಯಾಷನಲ್ ಶಾಲೆಯ ಖುಷಿ, ವಿಶ್ವೇಶ್ವರಯ್ಯ ಶಾಲೆಯ ಮಿಥುನ್, ನರಸಾಪುರದ ಸೂರ್ಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾದ ಭಾನುಪ್ರಸಾದ್ ಹಾಗೂ ಮಾನ್ಯತಾ, ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಪಟಲಂ ಗುಡಿ ಕ್ರಾಸಿನಲ್ಲಿರುವ ವಿ.ವಿ.ಎಂ ಶಾಲೆಯ ವಿದ್ಯಾರ್ಥಿಗಳಾದ ನಿಶಾಂತ್, ಚಂದನ್, ಗಿರಿ, ಗಗನ್ ಪ್ರೀತ್, ವೇದಾಂತ್ ಕುಮಾರ್, ಭರತ್ ಗೌಡ, ನಂದನ್ ಹಾಗೂ ಮೋಹಿತ್ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಕರಾಟೆ ಮುಖ್ಯ ತರಬೇತಿದಾರರಾದ ಕರಾಟೆ ರಾಮು ಹಾಗೂ ಶ್ರೇಯ ಆರ್ ಉಪಸ್ಥಿತರಿದ್ದರು.