ಶ್ರೀನಿವಾಸಪುರ :- ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಗೋಪಾಲ್ ರೆಡ್ಡಿ ರಾಜೀನಾಮೆ ನೀಡಿ ತೆರವಾಗಿದಂತಹ ಸ್ಥಾನಕ್ಕೆ ಆಗಸ್ಟ್ 13ರಂದು ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಮಂಜುಳಾರವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶ್ರೀನಿವಾಸನ್ ತಿಳಿಸಿದರು ಚುನಾವಣಾಧಿಕಾರಿ ಶ್ರೀನಿವಾಸನ್ ಮಾತನಾಡಿ ಹೊದಲಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರಿದ್ದು ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಂತಹ ಸಂದರ್ಭದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದು ಮಂಜುಳಾ ಹಾಗೂ ಲಕ್ಷ್ಮೀದೇವಮ್ಮ ಎಂಬವರು ನಾಮಪತ್ರ ಸಲ್ಲಿಕೆ ಮಾಡಿದ್ದು ಚುನಾವಣಾ ಪ್ರಕ್ರಿಯೆಂತೆ ಗೌಪ್ಯ ಮತದಾನ ಮಾಡಲಾಗಿ ಮಂಜುಳಾರವರಿಗೆ 12 ಮತಗಳು ಹಾಗೂ ಲಕ್ಷ್ಮೀದೇವಮ್ಮ ರವರಿಗೆ 6 ಮತಗಳು ಪಡೆದಿದ್ದು ಹೆಚ್ಚು ಅಂಕ ಪಡೆದ ಮಂಜುಳಾರವರನ್ನು ಗ್ರಾಮ ಪಂಚಾಯತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾದ ಮಂಜುಳಾ ಮಾತನಾಡಿ ನನಗೆ ಮತ ನೀಡಿ ಆಶೀರ್ವಾದ ಮಾಡಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ತಿಳಿಸಿ ನಾನು ಅಧಿಕಾರದಲ್ಲಿರುವವರೆಗೆ ಪಕ್ಷ ಬೇದ ಮರೆತು ಅರ್ಹ ಪಲಾನುಭವಿಗಳಗೆ ಸರ್ಕಾರ ದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತೇನೆ ಮೊದಲಿಗೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆಂದರು ಇನ್ನೂ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿರುದ್ದಿ ಅಧಿಕಾರಿ ಸಂಪತ್ ಕುಮಾರ್,ಗ್ರಾಮ ಪಂಚಾಯತಿ ಸದಸ್ಯರಾದ ಗೋಪಾಲ್ ರೆಡ್ಡಿ, ಅಶೋಕ್ ಕುಮಾರ್,ಗೀತಾ ರಾಮಚಂದ್ರ, ಗೋವಿಂದರೆಡ್ಡಿ,ಅನ್ನಪೂರ್ಣ,ಆಂಜನೇಯರೆಡ್ಡಿ,ಗೋವಿಂದಪ್ಪ, ಶೋಭಾ,ಶ್ರೀನಿವಾಸ್,ಅನುಸೂಯ, ಮುನಿಸ್ವಾಮಿ ಮುಖಂಡರಾದ ಇಮರಕುಂಟೆ ಮಂಜುನಾಥ್ ರೆಡ್ಡಿ, ಕೊಟ್ರಗುಳಿ ವೆಂಕಟ್ರಮರೆಡ್ಡಿ,ಹೊದಲಿ ಲಕ್ಷ್ಮಿಯ್ಯ,ತಿನ್ನಿಲಿ ಮಾದವಾಚಾರಿ,ದಾಸರತಿಮ್ಮಿನಹಳ್ಳಿ ರೆಡ್ದೆಪ್ಪ, ದೇವಲಪಲ್ಲಿ ನಾರಾಯಣಸ್ವಾಮಿ,ಆವುಲಕುಪ್ಪ ಮುನಿರತ್ನ,ಚೊಕ್ಕನಹಳ್ಳಿ ಸೀತಪ್ಪ ಸೇರಿ ಹಲವು ಜೆಡಿಎಸ್ ಮುಖಂಡರು ಹಾಜರಿದ್ದರು.