ಶ್ರೀನಿವಾಸಪುರ 1 : ಕಳೆದ ಸಾಲಿನಲ್ಲಿ ವಿವಿಧ ಹೆಚ್ಚು ರೋಗಗಳಿಂದ ಮಾವು ಫಸಲು ಸರಿಯಾಗಿ ಬಾರದೆ ಔಷಧಿಯನ್ನು ಸಿಂಪಡಣೆ ಮಾಡಿದರೂ ಸಹ ರೋಗವನ್ನು ತಡೆಗಟ್ಟಲು ಸಾಧ್ಯವಾಗದೆ ಹಾಗೂ ಮಾರುಕಟ್ಟೆಯಲ್ಲಿ ಇರುವಂತಹ ಒಳ್ಳೆಯ ಫಸಲಿಗೆ ನಿಗಧಿತ ಬೆಲೆ ಇಲ್ಲದೆ ಮಾವು ಬೆಳಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶಂಕರಮಠದ ಬಳಿಯ ಕರ್ನಾಟಕ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಸೋಮವಾರ ಜಿಲ್ಲೆಯ ಮಾವು ಬೆಳಗಾರ ಮಂಡಲಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಮಾವು ಬೆಳಗಾರ ಸಂಘವು ಹೋರಾಟಗಳೇ ಮಾಡಿಕೊಂಡು ಬಂದಿದ್ದವು , ಆದರೆ ಈ ಬಾರಿ ವಿಶೇಷವಾಗಿ ಮಾವು ಬೆಳೆಗಾರ ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಮಾವು ಬೆಳೆಯ ಪ್ರಾರಂಭ ಹಂತದಲ್ಲಿಯೇ ವಿವಿಧ ರೀತಿಯ ರೋಗಗಳನ್ನು ತಡೆಗಟ್ಟಲು ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಸ್ಥೆ ಹಾಗು ಕೋಲಾರ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳನ್ನು 17 ರಂದು ಪಟ್ಟಣದ ಮಾರುತಿ ಸಬಾಭವನದಲ್ಲಿ ಬೆಳಗ್ಗೆ 11 ಗಂಟೆಗೆ ತೋಟಗಾರಿಕೆ ಇಲಾಖೆ , ಮಾವು ಅಭಿವೃದ್ಧಿ ಮಂಡಲಿ , ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಮಾವು ಬೆಳಗಾರ ತೋಟಗಳಿಗೆ ರೋಗಗಳನ್ನು ತಡೆಗಟ್ಟಲು ಔಷಧಿಗಳನ್ನು ಯಾವ ರೀತಿಯಲ್ಲಿ ಸಿಂಪಡಣೆ ಮಾಡಬೇಕು ಎಂಬುದನ್ನ ವಿಜ್ಞಾನಿಗಳು ತಿಳಿಸಿಕೊಡಲಾಗುವುದು , ಈ ಕಾರ್ಯಾಗಾರದಲ್ಲಿ ವಿಜ್ಞಾನಿಗಳು ರೈತರಿಗೆ ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡಲಿದ್ದಾರೆ. ಈ ಒಂದು ಕಾರ್ಯಾಗಾರದಲ್ಲಿ ಜಿಲ್ಲಾಯಾದ್ಯಾಂತ ಮಾವು ಬೆಳಗಾರರು ಪಾಲ್ಗುಂಡು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಲಹೆಗಳನ್ನು ಪಡೆಯಬಹದಾಗಿದೆ ಎಂದರು.
ವಿಜ್ಞಾನಿಗಳು ಕೊಟ್ಟಂತಹ ಸಲಹೆ , ಮಾರ್ಗದರ್ಶನ , ಸೂಚನೆಗಳನ್ನು ಸದುಪಯೋಗವನ್ನು ಪಡೆದು ಈ ಬಾರಿ ಉತ್ತಮ ಫಸಲನ್ನು ಪಡೆಯಲು ಮನವಿ ಮಾಡಿದರು. ಒಂದು ದಿನದ ಕಾರ್ಯಾಗಾರದಲ್ಲಿ ವಿವಿಧ ಔಷಧಿ ಕಂಪನಿಗಳು ತಮ್ಮ ಕಂಪನಿಯಿಂದ ಮಳಿಗೆಗೆಗಳನ್ನು ತರೆಯುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮಾತನಾಡಿ ಕರ್ನಾಟಕದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶವಾಗಿದ್ದು, ಮಾರುಕಟ್ಟೆ ಬೇಡಿಕೆ ಆಧಾರಿತವಾಗಿ ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಯಲು ರೈತರಿಗೆ ಅರಿವು ಮೂಡಿಸಲು ಈ ಕಾರ್ಯಾಗಾರ ಅನುಕೂಲವಾಗಲಿದೆ ಎಂದರು.
ಮಾವು ಬೆಳಗಾರರ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಪಾತಕೋಟೆ ನವೀನ್ ಮಾತನಾಡಿದರು. ರೈತ ಸಂಘದ ಸದಸ್ಯ ಅಸ್ಲಾಂಪಾಷಾ ಇದ್ದರು.