ಶ್ರೀನಿವಾಸಪುರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಾವು ಹರಾಜು ಕಟ್ಟೆಯ ಉದ್ಗಾಟನಾ ಕಾರ್ಯಕ್ರಮ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 3 : ಎಪಿಎಂಸಿ ಪ್ರಾಂಗಣದಲ್ಲಿ ರೈತ ಕಟ್ಟೆಯನ್ನು ರೈತರಿಗಾಗಿ ಉಳಿಸುವಲ್ಲಿ 15ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದೆವು ಎಂದು ಮಾವು ಬೆಳಗಾರರ ಜಿಲ್ಲಾಧ್ಯಕ್ಷ ನೀಲೂಟುರು ಚಿನ್ನಪ್ಪರೆಡ್ಡಿ ಹೇಳಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಾವು ಉತ್ಪಾದಕ ಸಂಸ್ಥೆಯು ಬುಧವಾರ ರೈತರ ಹರಾಜು ಕಟ್ಟೆಯ ಉದ್ಗಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವರ್ಷ ನಮ್ಮ ಮಾವು ಉತ್ಪಾದಕರ ಸಂಸ್ಥೆಯಿಂದ ಎಪಿಎಂಸಿಯ ಕಾರ್ಯದರ್ಶಿಗಳಿಗೆ ಪತ್ರದ ಮುಖೇನ ಬೇಡಿಕೆಯನ್ನು ನೀಡಲಾಗಿತ್ತು . ಇತ್ತೀಚಿಗೆ ಎಪಿಎಂಸಿ ಕಚೇರಿಯಲ್ಲಿ ಶಾಸಕರ ನೇತೃತ್ವದಲ್ಲಿ ತಾಲೂಕು ಅಧಿಕಾರಿಗಳ ಹಾಗೂ ಮಾವು ಬೆಳಗಾರರ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಈ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದ ಶಾಸಕರು ರೈತರ ಸಮಸ್ಯೆಯನ್ನು ಅತಿಶೀಘ್ರವಾಗಿ ಅಧಿಕಾರಿಗಳಿಗೆ ಪರಿಹರಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಇದಕ್ಕೆ ಸ್ಪಂದಿಸಿದ ಎಪಿಎಂಸಿ ಕಾರ್ಯದರ್ಶಿ ಹಾಗೂ ಆಡಳಿತ ಮಂಡಲಿ ರೈತರ ಹರಾಜು ಕಟ್ಟೆಯನ್ನು ಇಂದು (ಬುಧವಾರ) ರೈತರಿಗೆ ಬಿಟ್ಟುಕೊಟ್ಟಿರುವ ಹಿನ್ನೆಯಲ್ಲಿ , ರೈತರ ಸಮಸ್ಯೆಯನ್ನು ಬಗೆಹರಿಸಿಕೊಟ್ಟ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಎಪಿಎಂಸಿ ಕಾರ್ಯದರ್ಶಿ ಉಮಾ ಮಾತನಾಡಿ ರೈತರು ಹಾಗೂ ಉತ್ಪಾದಕರು ರೈತರ ಹರಾಜು ಕಟ್ಟೆಯನ್ನು ರೈತರಿಗೆ ಬಿಟ್ಟುಕೊಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇದರ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು , ಶಾಸಕರ ರೈತರ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಪರಿಹರಿಸುವಂತೆ ಸೂಚನೆ ನೀಡಲಾಗಿತ್ತು . ಇದರ ಹಿನ್ನೆಲೆಯಲ್ಲಿ ರೈತರ ಹರಾಜು ಕಟ್ಟೆಯನ್ನು ರೈತರಿಗೆ ಬಿಟ್ಟುಕೊಡಲಾಗಿದ್ದು, ರೈತರು ಈ ಸೌಲಭ್ಯವನ್ನು ಸದುಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕೃಷಿ ಇಲಾಖೆ ಪ್ರಬಾರಿ ನಿರ್ದೇಶಕ ಮಂಜುನಾಥ್, , ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಶ್ರೀನಿವಾಸನ್, ಎಫ್‍ಟಿಒ ಸಂಸ್ಥೆಯ ಸಿಇಒ ಶಿವಕುಮಾರ್, ನಿರ್ದೇಶಕ ಬೆಲ್ಲಂ ಶ್ರೀನಿವಾಸರೆಡ್ಡಿ ಇತರರು ಇದ್ದರು.