ಮಂಗಳೂರು; ಎಸ್.ಸಿ.ಎಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎಸ್.ಸಿ.ಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ನ 31ನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಮತ್ತು 22ನೇ ಬ್ಯಾಚ್ ಜಿಎನ್ಎಂ ವಿದ್ಯಾರ್ಥಿಗಳ ದೀಪ ಪ್ರಜ್ವಲನೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು ತಾರೀಕು 17.01.2025 ನೇ ಶನಿವಾರ ಬೆಳಿಗ್ಗೆ 10 ಗಂಟೆಗೆ ಅಶೋಕನಗರದಲ್ಲಿರುವ ಕೆ.ಎ.ಎಂ.ಸಿ. ಕಟ್ಟಡದ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಡಾ.ಪದ್ಮಪ್ರಿಯಾ ಎಸ್, ಪ್ರಾಂಶುಪಾಲರು, ಡಾ.ಎಂ.ವಿ ಶೆಟ್ಟಿ ಕಾಲೇಜ್ ಆಫ್ ನರ್ಸಿಂಗ್, ಮಂಗಳೂರು ಇವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಡಾ| ಅಭಿನಯ್ ಸೊರಕೆ, ಕಾರ್ಯದರ್ಶಿ, ಕರ್ನಾಟಕ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಮಾರಿ. ಅಶ್ವಿತಾ, ಇವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ.ಯು, ಸಹಪ್ರಾಧ್ಯಾಪಕಿ, ಇವರು ಈ ದಿನದ ಮಹತ್ವದ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಪ್ರೊ ಡಾ.ಪದ್ಮಪ್ರಿಯಾ ಎಸ್, ಅವರು ವಿದ್ಯಾರ್ಥಿಗಳನ್ನು ಕುರಿತು ಈ ಉದಾತ್ತ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ರೋಗಿಗಳ ಆರೈಕೆಯಲ್ಲಿ ಸ್ಪರ್ಶದ ಮಹತ್ವ ಮತ್ತು ರೋಗಿಗಳ ಆರೈಕೆಯಲ್ಲಿ ಶುಶ್ರೂಷಕಿಯರ ಜವಾಬ್ದಾರಿಗಳನ್ನು ಒತ್ತಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೊಲಿಟ ಎಸ್. ಎಮ್. ಡಿಸೋಜ, ಇವರು ಹೊಸ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ಕುಮಾರಿ. ಕ್ಲೆಸಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದಲ್ಲಿ ಎಸ್.ಸಿ.ಎಸ್. ಗೂಫ್ ಆಫ್ ಇನ್ಸ್ಟಿಟ್ಯೂಟಿನ ಆಡಳಿತಾಧಿಕಾರಿ ಶ್ರೀ.ಯು. ಕೆ. ಖಾಲಿದ್, ಉಪಪ್ರಾಂಶುಪಾಲರು ಶ್ರೀ.ಅನಿಲ್ ಕುಮಾರ್, ಉಪನ್ಯಾಸಕಿ ಶ್ರೀಮತಿ ರಾಜಶ್ರೀ ಅವರು ಉಪಸ್ಥಿತರಿದ್ದರು. ಶ್ರೀಮತಿ ಸುಪ್ರೀತಾ, ಅವರು ವಂದನಾರ್ಪಣೆಗೈದರು. ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
Mangluru; SCS College of Nursing; Lighting of the lamp, taking of the oath – January 2025
Mangluru; The lamp lighting and oath taking ceremony of the 31th batch of B.Sc Nursing students and 22nd batch of GNM students of SCS College & Institute of Nursing Sciences was held on 17th January 2025 at KAMC Auditorium, Ashoknagar, Mangalore. The programme was inaugurated by Chief Guest Dr. Padma Priya S, Principal, Dr. M.V Shetty College of Nursing, Mangalore. Dr. Abhinay Sorake, Secretary, Karnataka Educational & Charitable Trust presided over the function. A heart warming welcome speech was given by Ms. Ashwitha. The novice nurses received the light from the Chief Guest of the programme. Mrs. Ashwini.U, Associate Professor highlighted the significance of the day.
The Chief Guest Dr. Padma Priya S, in her address congratulated the students for selecting this noble profession and stressed on the importance of touch in patient care and nurses responsibilities in patient care.
All the novice nursing students were rendered into the profession by taking the nurses oath delivered by the Principal, Prof. (Mrs.) Lolita S.M D’Souza. The program was compered by Ms. Clesiy. Vote of thanks was delivered by Mrs. Supreetha. Mr U.K Khalid Administrative officer and Mr. Anil Kumar, Vice Principal, and Coordinator Mrs. Rajashree was present for the programme.