

ಮಂಗಳೂರು: ಮಂಗಳೂರಿನ ಎಜೆ ವೈದ್ಯಕೀಯ ಕಾಲೇಜಿನ ಇಎನ್ಟಿ ವಿಭಾಗದ ಪ್ರಾಧ್ಯಾಪಕ ಡಾ| ಪಿ.ಪಿ. ದೇವನ್ ಅವರಿಗೆ ಪ್ರತಿಷ್ಠಿತ
“ಗೋಲ್ಡನ್ ಏಮ್’ ಪ್ರಶಸ್ತಿ ಲಭಿಸಿದೆ. 11ನೇ ಆವೃತ್ತಿಯ ಗೋಲ್ಡನ್ ಏಮ್ ಸಮ್ಮೇಳನವನ್ನು ಬೆ೦ಗಳೂರಿನ ಡೈನರ್ಜಿಕ್ ಬಿಸಿನೆಸ್ ಸೊಲ್ಯೂಷನ್ಸ್ ಆಯೋಜಿಸಿತ್ತು. ಈ ಸ೦ದರ್ಭದಲ್ಲಿ, ಸುಮಾರು ಒಂದು ದಶಕದ ಕಾಲ ಇಎನ್ಟಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಪಿ.ಪಿ. ದೇವನ್ ಅವರಿಗೆ “ಅತ್ಯಂತ ವಿಶ್ವಾಸಾರ್ಹ ಹೆಲ್ಫ್ಕೇರ್ ಲೀಡರ್ಶಿಪ್ – ಶ್ರೇಷ್ಟ ಇಎನ್ಟ ಸ್ಪೆಷಲಿಸ್ಟ್ ಎಂಬ ಗೌರವ ಪ್ರದಾನ ನೀಡಲಾಯಿತು.
