ಮಂಗಳೂರು, ಜುಲೈ 24 ಹಾಗೂ 25 ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟ್ಯಾಲೆಂಟ್ ಫೆಸ್ಟ್ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತುಳು ರಂಗಭೂಮಿ ಮತ್ತು ತುಳು ಚಲನಚಿತ್ರೋದ್ಯಮದ ಖ್ಯಾತ ನಟ ಭೋಜರಾಜ್ ವಾಮಂಜೂರ್ ಇವರು ನೆರವೇರಿಸಿದರು. ವಿವಿಧ ಹಾಸ್ಯ ಹಾಗೂ ಹಾಡುಗಳ ಮುಖಾಂತರ ಮಕ್ಕಳನ್ನು ರಂಜಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸಲು ಮಾರ್ಗದರ್ಶನವನ್ನು ನೀಡಿದರು. ಅಧ್ಯಕ್ಷೀಯ ಭಾಷಣದಲ್ಲಿ ವಂದನೀಯ ಗುರು ಆಂಡ್ರ್ಯೂ ಲಿಯೋ ಡಿಸೋಜಾ ರವರು
ತಮ್ಮ ಸಂದೇಶದಲ್ಲಿ, ಪ್ರತಿಯೊಬ್ಬ ಮಗುವಿಗೆ ಒಂದಲ್ಲ ಒಂದು ರೀತಿಯ ಪ್ರತಿಭೆ ಇದೆ. ಅದನ್ನು ಹುಡುಕಿ ಪ್ರೋತ್ಸಾಹಿಸಿದಾಗ ಪ್ರತಿಭೆಯು ಹೊರ ಚಿಮ್ಮುತ್ತದೆ. ನಾಚಿಕೆ ಭಯ ಮತ್ತು ಹಿಂಜರಿಕೆಯನ್ನು ಬಿಟ್ಟು ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಬೆಳೆಸಲು ಕರೆಕೊಟ್ಟರು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲರಾದ ವಂದನೀಯ ಪೀಟರ್ ಗೊನ್ಸಾಲ್ವಿಸ್ ವಂದನೀಯ ಲ್ಯಾನ್ಸಿ ಡಿಸೋಜಾ ಹಾಗೂ ಶಾಲಾ ನಾಯಕ ತೇಜಸ್ ಮತ್ತು ಶಾಲಾ ಉಪ ನಾಯಕಿ ಮೇಘನ್ ವೇದಿಕೆಯಲ್ಲಿ ಆಸೀನರಾಗಿದ್ದರು.
ತದನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ತರಗತಿ ವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.