ಮಂಗಳೂರು: ಅಪಾರ್ಟ್ಮೆಂಟ್ ಒಂದರಲ್ಲಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ರೂಂ ಪಡೆದು ವಿದ್ಯಾರ್ಥಿನಿಗಳೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿರುವುದು ಬೆಳಕಿಗೆ ಬಂದ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ನಗರದ ಅಪಾರ್ಟ್ಮೆಂಟ್ನಲ್ಲಿ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ರೂಂ ಪಡೆದಿದ್ದರು. ಆ ರೂಮ್ನಲ್ಲಿ ಕೆಲ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ನಡೆದುಕೊಂಡ ಬಗ್ಗೆ ಪರಿಶೀಲಿಸಿ ವಿಡಿಯೋ ಮಾಡಿದ ಹುಡುಗನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ’ ಎಂದಿದ್ದಾರೆ.
ಉಳಿದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಯಾರು ಅನ್ನೋ ಮಾಹಿತಿ ಕೂಡ ಸಿಕ್ಕಿದೆ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿನಿಯನ್ನ ಠಾಣೆಗೆ ಕರೆಸಿ ಮಾಹಿತಿ ಪಡೆಯುವ ಪ್ರಕ್ರಿಯೆ ನಡೆದಿದೆ. ಮಂಗಳೂರು ನಗರದ ಬಾವುಟಗುಡ್ಡೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ಜನವರಿಯಲ್ಲಿಯೇ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಹುಡುಗರು ವಿದ್ಯಾರ್ಥಿನಿಯರನ್ನು ರೂಮ್ ಮಾಡಿ ಕರೆ ತರುತ್ತಿದ್ದರು
ಹುಡುಗರು ಎರಡು ತಿಂಗಳುಗಳ ಕಾಲ ನಗರದ ಬಾವುಟಗುಡ್ಡೆ ಬಳಿಯ ಅಪಾರ್ಟ್ಮೆಂಟ್ನ ರೂಮ್ ಮಾಡಿ ನೆಲೆಸಿದ್ದರು. ಈ ವೇಳೆ ಮದ್ಯಪಾನ ಮಾಡುವುದು ಮತ್ತು ಯಾರನ್ನೋ ಕರೆದುಕೊಂಡು ಬರುತ್ತಿರುವುದನ್ನು ತಿಳಿದ ಅಪಾರ್ಟ್ಮೆಂಟ್ ಮಾಲೀಕರು ಹುಡುಗರನ್ನು ಅಪಾರ್ಟ್ಮೆಂಟ್ನಿಂದ ಖಾಲಿ ಮಾಡಿಸಿದ್ದರು” ಎಂದು ಆಯುಕ್ತರು ತೀಳಿಸಿದರು.
ವಿಡಿಯೋ ಲೀಕ್ ಮಾಡಿದ್ದು ಒರ್ವ ವಿದ್ಯಾರ್ಥಿ
ವಿಡಿಯೋ ಲೀಕ್ ಬಗ್ಗೆ ಮಾತನಾಡಿ, ವಿದ್ಯಾರ್ಥಿಯೊಬ್ಬ ತನ್ನ ತರಗತಿಯ ವಾಟ್ಸಪ್ ಗ್ರೂಪ್ಗೆ ನೇರವಾಗ ಹಂಚಿಕೊಂಡು ಇದನ್ನು ಸಂಯೋಜಕ ಪ್ರಾಂಶುಪಾಲರಿಗೆ ಮಾಹಿತಿ ತಿಳಿಸಿದ್ದಾನೆ. ಬಳಿಕ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಕರೆಸಿ ಮಾತನಾಡಿದ್ದು, ಆಂತರಿಕ ಶಿಸ್ತು ಪಾಲನಾ ಸಮಿತಿ ಮೂಲಕ ವಿಚಾರಣೆ ನಡೆಸಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ವಿಡಿಯೋ ವೈರಲ್ ಪ್ರಕರಣ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಲ್ಲ, ವಿಚಾರಣೆ ನಡೆಸಿದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ನಕಲಿ ಖಾತೆ ತೆರೆದು ವಿಡಿಯೋ ಅಪ್ಲೋಡ್ ಮಾಡಲಾಗಿತ್ತು
ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಷಕರನ್ನ ಕರೆಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಂಡು ಬಂದಿಲ್ಲ, ದೌರ್ಜನ್ಯ ಕಂಡುಬಂದರೆ ಪ್ರಕರಣ ದಾಖಲಿಸಲಾಗುವುದು.
ವಿದ್ಯಾರ್ಥಿನಿಯರ ವಯಸ್ಸಿನ ಆಧಾರದಲ್ಲಿ ಪೋಸ್ಕೋ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ
ಈ ಪ್ರಕರಣದಲ್ಲಿ ಮಂಗಳೂರು ನಗರ ಮತ್ತು ಹೊರಗಿನ ವಿದ್ಯಾರ್ಥಿಗಳು ಇದ್ದಾರೆ. ವಿಡಿಯೋದ ಹೊರತಾಗಿ ಯಾರೆಲ್ಲಾ ಇದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಯಾರಾದರೂ ದೂರು ಕೊಟ್ಟರೆ ಅದನ್ನು ಆಧರಿಸಿ ತನಿಖೆ ನಡೆಸಲಾಗುವುದು ಎನ್ನುತ್ತಾ ವಿದ್ಯಾರ್ಥಿನಿಯರ ವಯಸ್ಸಿನ ಆಧಾರದಲ್ಲಿ ಪೋಸ್ಕೋ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುವುದೆಂದು ತಿಳಿಸಿದರು.