ಮಂಗಳೂರು ಕೊಂಕಣಿ ನಾಟಕ ಸಭಾ-80 ವರುಷದ ಸಂಭ್ರಮ- ಕೊಂಕಣಿ ಭಾಷೆ ಸಂಸ್ಕøತಿ ಬೀಷ್ಮ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ


ಕೊಂಕಣಿ ನಾಟಕ ಸಭಾ ಮಂಗಳೂರು ಇದರ 80 ವರುಷದ ಸಂಭ್ರಮ ಮತ್ತು ಕೊಂಕಣಿ ಭಾಷೆ ಸಂಸ್ಕøತಿ ಹಾಗೂ ಬೀಷ್ಮ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಫೆಬ್ರವರಿ 19 ರಂದು ಸಂಜೆ ಡೋನ್ ಬೋಸ್ಕೋ ಸಭಾಂಗಣದಲ್ಲಿ ಜರುಗಿತು.
ಇದರ ಅಧ್ಯಕ್ಷತೆಯನ್ನು ವಂದನೀಯ ಧರ್ಮಗುರುಗಳಾದ ರೊಕ್ಕಿ ಡಿ ಕುನ್ನಾರವರು ವಹಿಸಿ ಶ್ರೀಮಾನ್ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಶ್ರೀ ಜೆ.ಆರ್ ಲೋಬೋ (ಮಂಗಳೂರು ದಕ್ಷಿಣಕ್ಷೇತ್ರ ಮಾಜಿ ಶಾಸಕರು) , ಶ್ರೀ ವಾಲ್ಟರ್ ನಂದಳಿಕೆ (ದಾಯ್ಜಿ ವಲ್ಡ್ ಮೀಡಿಯಾ ಸಂಸ್ಥಾಪಕರು) ಶ್ರೀ ರೋಹನ್ ಮೋಂತೆರೋ (ಮ್ಹಾಲಕರು ರೋಶನ್ ಕಾರ್ಪೊರೇಶನ್) ಉಪಸ್ಥಿತರಿದ್ದರು. ಕೊಂಕಣಿ ನಾಟಕ ಸಭಾ ಉಪಾಧ್ಯಕ್ಷರಾದ ಶ್ರೀ ಲಿಸ್ಟನ್ ಡಿ’ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ಲೊಯ್ಡ್ ಡಿಮೆಲ್ಲೊ ಧನ್ಯವಾದ ವಿತ್ತರು. ಶ್ರೀ ಜೆರಾಲ್ಡ್ ಕೊನ್ಸೆಸೊ, ಶ್ರೀ ಕ್ಲಿಟಸ್ ಲೋಬೋ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಶ್ರೀ ಎಲೋಷಿಯಸ್ ಡಿ ಸೋಜಾ ಮತ್ತು ಶ್ರೀ ಸುನೀಲ್ ಎರಿಕ್ ಒಝೋರಿಯೋರವರ ವ್ಯಕ್ತಿ ಪರಿಚಯ ನೀಡಿದರು. ಮನು ಬಂಟ್ವಾಳ್ ಕಾರ್ಯ ನಿರ್ವಹಿಸಿದರು. 80 ವರುಷದ ಸಂಭ್ರಮ ಪ್ರಯುಕ್ತ ಪುಟ್ಟ ಮಕ್ಕಳಿಗಾಗಿ ಬೇಬಿ ಶೋ, ಮದುವೆಯಾದ ಜೋಡಿಗಳಿಗೆ ಭಾರತದ ಸಂಪ್ರದಾಯದ ಉಡುಗೆ ತೊಡುಗೆ ಮತ್ತು ನೃತ್ಯ ಸ್ಪರ್ಧೆ ಮತ್ತು ಕೇಕ್ ತಾಯಾರಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಸ್ಪರ್ಧೆಯಲ್ಲಿ ವಿಜೇತರಿಗೆ ಟ್ರೋಫಿಗಳನ್ನು ನೀಡಿ ಪುರಸ್ಕರಿಸಲಾಯಿತು.