ಮಂಗಳೂರು: ದಿನಾಂಕ 8.03.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದುರೂ ಮಂಗಳೂರು ಹಾಗೂ ಅರೈಝ್ ಪೌಂಡೇಶನ್ , ಸಹೋದಯ ಬೆಥನಿ ಮಹಿಳಾ ಒಕ್ಕೂಟ, ಮಂಗಳೂರು ವಿಶ್ವ ವಿದ್ಯಾನಿಲಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರ ಜಂಟಿ ಆಶ್ರಯದಲ್ಲಿ ಪುಷ್ಪಾಲಯ ಸಂಭಾಗಣದಲ್ಲಿ ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ ಎಂಬ ವಿಷಯವನ್ನಾಧರಿಸಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರ್ಥನಾ ನೃತ್ಯದ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಭ| ಸಂತೋಷ್ ಮರಿಯಾ ಬಿ.ಎಸ್ ಮಹಾಮಾತೆಯ ಸಲಹೆದಾರರು/ ಬೆಥನಿ ಸಮಾಜ ಸೇವಾ ಪ್ರತಿಷ್ಠಾನದ ಸದಸ್ಯೆಯಾದ ಇವರು ಈಗಿನ ತಾಂತ್ರಿಕ ಯುಗದಲ್ಲಿ ಮಹಿಳೆಯರು, ಹುಡುಗಿಯರು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳ ಜಾಗತಿಕ ಸಬಲೀಕರಣಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತಿದೆ. ತಾಂತ್ರಿಕ ಯುಗವು ಎಲ್ಲಾ ರೀತಿಯ ಅಸಮಾನತೆ ಮತ್ತು ಅದನ್ನು ತೊಡೆದು ಹಾಕಲು ಅಭೂತಪೂರ್ಣ ಅವಕಾಶವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಯಾವುದೇ ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸಮಾನರೆಂಬ ಭಾವನೆ ಎಲ್ಲರಲ್ಲೂ ಮೂಡಬೇಕೆಂದು ತಿಳಿಸುತ್ತಾ ತಮ್ಮ ಉತ್ತಮ ಸಂದೇಶವನ್ನು ನೀಡಿ ಮಹಿಳೆಯರನ್ನು ಹುರಿದುಂಬಿಸಿ ಶುಭ ಹಾರೈಸಿದರು. ತದನಂತರ ಶ್ರೀ ಶಶಿಧರ್ ಪಟ್‍ಗಾರ್ ಇವರು ಈ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸೈಬರ್ ಕ್ರೈಂ ಎಂದರೇನು? ಇದರಿಂದ ಮಹಿಳೆಯರು ಯಾವೆಲ್ಲ ರೀತಿಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ, ಸಮಾಜಿಕ ಜಾಲತಾಣದಿಂದಾಗುವ ಉಪಯೋಗ ಮತ್ತು ದುರುಪಯೋಗÀ, ಇದರಿಂದ ಯಾವ ರೀತಿಯಲ್ಲಿ ಜಾಗೃತಿ ಹೊಂದಬೇಕೆಂಬುದರ ಕುರಿತಾಗಿ ಮಾಹಿತಿ ನೀಡಿದರು. ನಂತರ ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ನಗದು ಹಾಗೂ ಪ್ರಮಾಣ ಪತ್ರ ನೀಡಲಾಯಿತು ಅದರೊಂದಿಗೆ ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯ ರೂವಾರಿಯಾದ ಭ| ಎಸ್ತೆಲಿಟಾ ಬಿ.ಎಸ್ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಉತ್ತಮ ನಾಯಕಿಯಾರಾದ ಶ್ರೀಮತಿ ಸುನೀತಾ, ಶ್ರೀಮತಿ ಶೋಭಾ ಇವರು ಕಳೆದ ವರ್ಷ ಎಲ್ಲಾ ಸ್ವ-ಸಹಾಯ ಸಂಘಗಳ ಆಂತರಿಕ ಮೌಲ್ಯ ಮಾಪನವನ್ನು ನಡೆಸಿಕೊಟ್ಟ ಇವರಿಗೆ ವೇದಿಕೆಯಲ್ಲಿ ಅಭಿನಂದಿಸಲಾಯಿತು.