

ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ಇಂದು , ಎಂಟನೆಯ ದಿನದ ನೊವೆನಾ ಪ್ರಾರ್ಥನೆಯು ಮಿಲ್ಲಾಗ್ರಿಸ್ ಚರ್ಚಿನಲ್ಲಿ ನೆರವೇರಿತು ಬಜ್ಪೆ ಕೃಪಾಸಾಧನ್ ಮೈನರ್ ಸೆಮಿನರಿಯ ರೆಕ್ಟರ್ ವಂದನೀಯ ಕ್ಲಾನಿ ಡಿಸೋಜಾ ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಅವರು ದಿನದ ವಿಷಯವಾದ ನಾಲಿಗೆ ಸುವಾರ್ತೆ ಪ್ರಸಾರಕ್ಕೆ ಆಧಾರ , ಅದಕ್ಕೆ ನೀಡಿದ್ದಾರೆ ವರಗಳು ಅಪಾರ ಎಂಬ ವಿಷಯದ ಮೇಲೆ ಪ್ರವಚನ ವಿತ್ತರು. ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ಲ್ಯಾರಿ ಪಿಂಟೊ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡರು. ಎಂಟನೆಯ ದಿನದ ನೊವೆನಾ ಪ್ರಾರ್ಥನೆಯಲ್ಲಿ , ಸಂತ ಅಂತೋನಿ ಆಶ್ರಮದ ನಿವಾಸಿಗಳಿಗೋಸ್ಕರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.