ಮಂಗಳೂರು : ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬಕ್ಕೆ ಚಾಲನೆ

ಮಂಗಳೂರು: ಮಂಗಳೂರಿನ ಮಿಲಾಗ್ರಿಸ್ ಚರ್ಚ್‍ನ ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬಕ್ಕೆ ವಂದನೀಯ ಫಾದರ್ ಒನಿಲ್ ಡಿ’ಸೋಜ ರವರು ಸಂತ ಆಂತೋನಿಯವರ ದ್ವಜಾರೋಹಣ ಮಾಡುವ ಮುಕಾಂತರ ಚಾಲನೆ ನೀಡಿದರು. ಮಂಗಳೂರಿನ ಮಿಲಾಗ್ರಿಸ್ ಚರ್ಚ್‍ನ ಸಂತ ಆಂತೋನಿಯವರ ಪುಣ್ಯಕ್ಷೇತ್ರದ ಹಬ್ಬವು ಫೆಬ್ರವರಿ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಇದರ ತಯಾರಿಯಾಗಿ 9 ದಿವಸಗಳ ನೊವೆನಾ ಪ್ರಾರ್ಥನೆಯನ್ನು ಇಂದು ಆರಂಬಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಗುರುಗಳು ಪ್ರಾರ್ಥನ ವಿಧಿಯನ್ನು ನೆರೆವೆರಿಸಲಿದ್ದಾರೆ. ಹಬ್ಬದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾದ್ಯಕ್ಷರು ಅತಿ ವಂದನೀಯ ಅಲೋಶಿಯಸ್ ಪೌಲ್ ಡಿ’ಸೋಜವರು ಫೆಬ್ರವರಿ 15 ರಂದು ಸಂಜೆ 6 ಗಂಟೆಗೆ ಮಿಲಾಗ್ರಿಸ್ ಚರ್ಚ್‍ನಲ್ಲಿ ನೇರವೇರಿಸಲಿದ್ದಾರೆ. 

ವಂದನೀಯ ಗುರು ಒನಿಲ್ ಡಿ’ಸೋಜ ಹಬ್ಬದ ಧ್ವಜರೋಹಣ ಮಾಡಿ “ಕಳೆದ 125 ವರ್ಷಗಳಲ್ಲಿ ಜೆಪ್ಪು ಸಂತ ಆಂತೋನಿಯವರ ಆಶ್ರಮದಲ್ಲಿ ವಿವಿಧ ಪವಾಡಗಳನ್ನು ಮಾಡಿದ ಈ ಸಂತರು ಇನ್ನೂ ಹಲವಾರ ಪವಾಡಗಳ್ಳು ತನ್ನ ಭಕ್ತರಲ್ಲಿ ಮಾಡಲಿ ಎಂದು ಅರ್ಶಿವಾದಿಸಿದರು. ಈ ಕಾರ್ಯಕ್ರಮದಲ್ಲಿ ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ರೂಪೇಶ್ ತಾವ್ರೊ, ವಂದನೀಯ ಲ್ಯಾರಿ ಪಿಂಟೊ ಹಾಗೂ ನೂರಾರು ಭಕ್ತಾಧಿಗಳಿ ಪಾಲ್ಗೊಂಡರು. ಪ್ರಥಮ ದಿವಸದ ನೊವೆನಾ ಪ್ರಾರ್ಥನೆಯಲ್ಲಿ ಕುಟುಂಬಗಳಿಗೊಸ್ಕರ ಪ್ರಾರ್ಥಿಸಲಾಯಿತು.