ಮಂಗಳೂರು; ಮದರ್ ಆಫ್ ಗಾಡ್ ಚರ್ಚ್, ಶಕ್ತಿನಗರ, ಕಥೊಲಿಕ್ ಸಭಾ ಶಕ್ತಿನಗರ ಘಟಕ, ಸಂತ ಲಾರೆನ್ಸ ವಾರ್ಡ್, ನೇಜಿಗುರಿ ಗುಂಪು
ಇವರ ವತಿಯಿಂದ ಬಂದುತ್ವ ಕ್ರಿಸ್ಮಸ್ ಹಾಗೂ ಹೊಸ ವರ್ಷ-2025 ಆಚರಣೆ ಕಾರ್ಯಕ್ರಮ ಬುಧವಾರ 01.01.2025 ಸಂಜೆ 6.30 ಗಂಟೆಗೆ ಸರಿಯಾಗಿ, ನೇಜಿಗುರಿಯ ಸುಜಿ ಅಣ್ಣ (ತಾರಕ್ಕ) ಮನೆ ವಟಾರದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು.
ಸಮಾಜ ಸೇವೆಗೆ ತನ್ನನ್ನು ತಾನು ತೊಡಗಿಕೊಂಡಿರುವ ನೇಜಿಗುರಿ ಗುಂಪಿನ ಕಾರ್ಯದರ್ಶಿ ಹಾಗೂ ನೇಜಿಗುರಿ ಸ್ವಸಹಾಯ ಸಂಘ ಇದರ ಅಧ್ಯಕ್ಷರಾದ ಹರಿಣಿ ನೇಜಿಗುರಿ ಇವರನ್ನು ಸನ್ಮಾನಿಸಲಾಯಿತು.
ಶಕ್ತಿನಗರ ಚರ್ಚಿನ ಪಾಲನ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಮೇರಿ ಪಿಂಟೊ, ಶಕ್ತಿನಗರ್ ಘಟಕದ ಕಾರ್ಯದರ್ಶಿ ಶ್ರೀಮತಿ ಲವೀನಾ ಪಿಂಟೊ, ಸಹ ಕಾರ್ಯದರ್ಶಿ ಶ್ರೀಯುತ ಅನೀಶ್ ಮಿನೆಜಸ್, ಸಂತ ಲಾರೆನ್ಸ ವಾರ್ಡಿನ ಗುರ್ಕಾರ್ ಶ್ರೀಮತಿ ಸರಿತಾ ಡಿಸೋಜ,
ನೇಜಿಗುರಿ ಗುಂಪು ಅಧ್ಯಕ್ಷರು ಹಾಗೂ ನೇಜಿಗುರಿ ಧ್ವನಿ ಸಂಪಾದಕರಾದ ಶ್ರೀಯುತ ಅರುಣ್ ಡಿಸೋಜಾ, ನೇಜಿಗುರಿ ಗುಂಪಿನ ರಾಕೇಶ್, ರಾಮಚಂದ್ರ, ವಿಜೇತ್, ತಾರಕ್ಕ, ಸುಂದರ, ನೇಜಿಗುರಿ ಕ್ರಿಕೆಟರ್ ಟೀಮಿನ ಧನರಾಜ್, ದೀಕ್ಷಿತ್, ಚೇತನ್, ನೇಜಿಗುರಿ ಸ್ವಸಹಾಯ ಸಂಘದ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿಶೇಷ ಆಕರ್ಷಣೆ ರಾಜ್ ಸೌಂಡ್ ಅಂಡ್ ಲೈಟ್ಸ್ …ತುಳು ಸಿನಿಮ ಪ್ರದೇಶನಗೊಂಡಿತ್ತು.
ಎಲ್ಲರೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯವನ್ನು ಕೋರಿದರು.
ಬಂಧುತ್ವ ಕ್ರಿಸ್ಮಸ್ ಅಂಗವಾಗಿ 25 ಕುಟುಂಬಕ್ಕೆ ಕ್ರಿಸ್ಮಸ್ ಕಿಟ್ ವಿತರಿಸಲಾಯಿತು. ಒಂದು ಕುಟುಂಬಕ್ಕೆ 9000 ಇನ್ನೊಂದು ಕುಟುಂಬಕ್ಕೆ 5000 ರೂಪಾಯಿಯ ಧನ ಸಹಾಯ ಕೂಡ ವಿತರಿಸಲಾಯಿತು.