ಮಂಗಳೂರು: 8 ವರ್ಷದ ಬಾಲಕಿಯ ಶವ ಚರಂಡಿಯಲ್ಲಿ ಪತ್ತೆ, ಪ್ರಕರಣಕ್ಕೆ ಸಂಬಂಧಿಸಿದಂತೆ ೨೦ ಮಂದಿ ಪೊಲೀಸ್ ವಶಕ್ಕೆ

JANANUDI.COM NETWOR


ಮಂಗಳೂರು: ನಗರದ ಪರಾರಿಯ ಹೆಂಚಿನ ಕಾರ್ಖಾನೆಯ ವಠಾರದ ಚರಂಡಿಯಲ್ಲಿ 8 ವರ್ಷದ ಹೆಣ್ಣು ಮಗಳ ಶವ ಪತ್ತೆಯಾಗಿದ್ದು, ಅತ್ಯಾಚಾರ ವೆಸಗಿ ಬಾಲಕಿಯನ್ನು ಚರಂಡಿಗೆ ಬಿಸಾಡಿರುವ ಅನುಮಾನ ಉಂಟಾಗಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಉತ್ತರ ಭಾರತ ಮೂಲದ 20 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪರಾರಿ ಎಂಬಲ್ಲಿ ರಾಜ್ ಟೈಲ್ಸ್ಸ್ ಹೆಂಚಿನ ಕಾರ್ಖಾನೆಯ ಕಾರ್ಮಿಕರೊಬ್ಬರ ೮ ವರ್ಷದ ಬಾಲಕಿಯನ್ನು ಭಾನುವಾರ ಅಪಹರಿಸಿ ಹತ್ಯೆ ನಡೆಸಿ ಚರಂಡಿಗೆಸೆಯಲಾಗಿದ್ದು,. ಭಾನುವಾರ ಕಾರ್ಖಾನೆಗೆ ರಜೆ ಇದ್ದುದರಿಂದಾಗಿ ಕಾರ್ಮಿಕರೆಲ್ಲರೂ ಅಲ್ಲೇ ವಾಸವಿದ್ದರು ಎನ್ನಲಾಗಿದೆ. ಈ ವೇಳೆ ಬಾಲಕಿಯನ್ನು ಅಪಹರಿಸಿ ದುಷ್ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ, ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಘಟನೆ ನಡೆದ ಕಾರ್ಖಾನೆಯನ್ನು ಕೇರಳ ಮೂಲದ ವ್ಯಕ್ತಿಗಳು ನಡೆಸುತ್ತಿದ್ದು, ಇಲ್ಲಿ ಸುಮಾರು ೨೫ ಕಾರ್ಮಿಕರು ದುಡಿಯುತ್ತಿದ್ದರು ಎನ್ನಲಾಗಿದೆ.
ಪ್ರಕರಣದ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರು ಸ್ಥಳೀಯ ಸಿಸಿ ಟಿವಿ ಫುಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಮುಖ್ಯವಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಈಗಾಗಲೇ ಹಲವು ಆಯಾಮಗಳಲ್ಲಿ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.