JANANUDI.COM NETWORK
ನವದೆಹಲಿ: ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವಾಗ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್‍ಗಳನ್ನು ತಯಾರಿಸುವಂತೆ ಹೆಲ್ಮೆಟ್ ತಯಾರಕರಿಗೆ ಸರ್ಕಾರ ಸೂಚಿಸಿದೆ.
ಅಲ್ಲದೆ, ಹೊಂದಾಣಿಕೆ ಮಾಡಬಹುದಾದ ಸುರಕ್ಷತಾ ಸರಂಜಾಮುಗಳನ್ನು ಮಕ್ಕಳು ತಮ್ಮ ಸುರಕ್ಷತೆಗಾಗಿ ಧರಿಸಬೇಕು. ಹೊಸ ನಿಯಮದ ಪ್ರಕಾರ, ಯಾವುದೇ ಉಲ್ಲಂಘನೆಗೆ 1,000 ರೂ. ದಂಡ ಮತ್ತು ಮೂರು ತಿಂಗಳ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.
ಹೊಸ ನಿಯಮಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989 ರ ತಿದ್ದುಪಡಿಯ ಮೂಲಕ ಪ್ರಸ್ತಾಪಿಸಲಾಗಿದೆ. ಇದು ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಒಳಗೊಂಡಿರುತ್ತದೆ. ಮಕ್ಕಳು ಪ್ರಯಾಣಿಸುತ್ತಿರುವ ಯಾವುದೇ ದ್ವಿಚಕ್ರ ವಾಹನವು ಗಂಟೆಗೆ ಗರಿಷ್ಠ 40-ಕಿಮೀ ವೇಗದ ಮಿತಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ಮಾಡುವ ಮಕ್ಕಳಿಗೆ ಸುರಕ್ಷತಾ ಸರಂಜಾಮು ಮತ್ತು ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರವು ಈ ಹಿಂದೆ ಪ್ರಸ್ತಾಪಿಸಿತ್ತು. ಈ ವಿಷಯದ ಬಗ್ಗೆ ನಾಗರಿಕರ ಅಭಿಪ್ರಾಯವನ್ನು ಕೇಳಲು ಅಕ್ಟೋಬರ್ 2021 ರಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿತು.
ಮಕ್ಕಳ ಹೆಲ್ಮೆಟ್‍ಗಳನ್ನು ತಯಾರಿಸಲು ಸರ್ಕಾರವು ಭಾರತೀಯ ಹೆಲ್ಮೆಟ್ ತಯಾರಕರನ್ನು ಕೇಳಿದೆ, ಅವುಗಳ ಗಾತ್ರಕ್ಕೆ ಅನುಗುಣವಾಗಿ, ಸುರಕ್ಷತಾ ಸರಂಜಾಮು ಭುಜದ ಕುಣಿಕೆಗಳನ್ನು ರೂಪಿಸುವ ಒಂದು ಜೋಡಿ ಪಟ್ಟಿಗಳೊಂದಿಗೆ ಇರಬೇಕು ಮತ್ತು ಮಗುವನ್ನು ಚಾಲಕನಿಗೆ ಸುರಕ್ಷಿತಗೊಳಿಸುವಂತಾಗಿರಬೇಕು, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಪ್ರಕಾರ ಇರಬೇಕು, ಸರಂಜಾಮು ಕಡಿಮೆ ತೂಕ, ಹೊಂದಾಣಿಕೆ, ಜಲನಿರೋಧಕ ಮತ್ತು ಬಾಳಿಕೆ ಬರುವಂತಹದ್ದಾಗಿರಬೇಕು. ಹೆಚ್ಚಿನ ಸಾಂದ್ರತೆಯ ಫೆÇೀಮ್‍ನೊಂದಿಗೆ ಭಾರವಾದ ನೈಲಾನ್ ಅಥವಾ ಮಲ್ಟಿಫಿಲೆಮೆಂಟ್ ನೈಲಾನ್ ವಸ್ತುಗಳನ್ನು ಬಳಸಿ ಸರಂಜಾಮು ನಿರ್ಮಿಸಬೇಕು ಈ ರೀತಿ ಹೆಲ್ಮೆಟ್ ತಯಾರಕರಿಗೆ ಸೂಚನೆ ನೀಡಲಾಗಿದೆ.
ಇದು ಸುರಕ್ಷತ ದ್ರಷ್ಟಿಯಿಂದ ಉತ್ತಮ ಹೆಜ್ಜೆಯಾಗಿದೆ. ಹೆತ್ತವರು ಹೆಲ್ಮೆಟ್ ಹಾಕಿಕೊಂಡು ಸವಾರಿ ಮಾಡುವುದನ್ನು ನಾವು ಆಗಾಗ್ಗೆ ನೋಡುತ್ತೇವೆ, ಆದರೆ ಮಕ್ಕಳಿಗೆ ಅಂತಹ ಸವಲತ್ತು ಇರುವುದಿಲ್ಲ. ಅವರ ಜೀವವೂ ಅಮೂಲ್ಯ ಹಾಗಾಗಿ ಮಕ್ಕಳಿಗೂ, ಹಿಂದೆ ಕುಳಿತುಕೊಂಡವರಿಗೂ ಸುರಕ್ಷತಾ ದ್ರಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಒಳಿತಾಗಿದೆ. ದ್ವಿ ಚಕ್ರ ವಾಹನದವರು ಹೆಲ್ಮೆಟ್ ನಮಗಾಗಿ ಧರಿಸಬೇಕೆ ವಿನಹ ಪೆÇಲೀಸರಿಗಾಗಿ ಅಲ್ಲ ಎಂಬುದು ಮನಗಾಣಬೇಕು. ಅನೇಕ ದೇಶಗಳು ಮಕ್ಕಳು ಬೈಕ್‍ಗಳಲ್ಲಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿವೆ. ಕೇರಳದಲ್ಲಿ ಹಲವು ವರ್ಷಗಳಿಂದ ಇಂತಹ ಸರಂಜಾಮು ಕಡ್ಡಾಯವಾಗಿದೆ.