ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಕಡಲ್ಲಳ್ಳರಿಂದ ಅಪಹರಣವಾಗಿದೆ. ಅಪಹರಣಕ್ಕೊಳಗಾಗಿರುವ ವಾಣಿಜ್ಯ ಮಾಲ್ಟಾ ಹಡಗು ಎಂವಿ ರೂಯೆನನ್ನು ರಕ್ಷಿಸಲು ಭಾರತೀಯ ನೌಕಾಪಡೆ ಮುಂದಾಗಿದೆ.
18 ಸಿಬ್ಬಂದಿಗಳನ್ನು ಹೊಂದಿದ್ದ ಅಪಹರಣಕ್ಕೊಳಗಾದ ಹಡಗಿನಿಂದ ಯುಕೆಎಂಟಿಒ ಪೋರ್ಟಲ್, ಡಿಸೆಂಬರ್ 14 ರಂದು ಮೇಡೇ ಸಂದೇಶವನ್ನು ಕಳುಹಿಸಿತ್ತು.
ಹಡಗಿನಲ್ಲಿ ಆರು ಮಂದಿ ಅಪರಿಚಿತ ವ್ಯಕ್ತಿಗಳು ಅನಧಿಕೃತವಾಗಿ ಏರಿದ್ದರು. ಕೂಡಲೇ ಹಡಗಿನಿಂದ ಅಪಹರಣದ ಸಂದೇಶ ಬಂದಿದೆ ಎನ್ನಲಾಗಿದೆ.
ಮಾಹಿತಿ ಬಂದ ಕೂಡಲೇ ತ್ವರಿತವಾಗಿ ಪ್ರತಿಕ್ರಿಯಿಸಿದ ಭಾರತೀಯ ನೌಕಾಪಡೆಯು ತನ್ನ ನೌಕಾ ಸಾಗರ ಗಸ್ತು ವಿಮಾನವನ್ನು ಕಣ್ಣಾಪಲಿಗೆ ನಿಯೋಜಿಸಿದೆ.