JANANUDI.COM NETWORK
ವೀಕೆಂಡ್ ಕಫ್ರ್ಯೂ ಹೇರಿರುವುದೇ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸಲು ಎಂದು ಅಪಾದಿಸುತ್ತ ಬಂದಿದ್ದ ಕಾಂಗ್ರೆಸ್, ಕಾಂಗ್ರೆಸ್ ಪಕ್ಷದ ನೇತ್ರತ್ವದಲ್ಲಿ ಮೇಕೆದಾಟು ಯೋಜನೆ ಕಾಮಗಾರಿ ಶೀಘ್ರ ಆರಂಭಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಚಾಲನೆ ಮಾಡಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವ್ರು ಈ ಪಾದಯಾತ್ರೆಗೆ ಚಾಲನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದ್ದು, ಕಾಂಗ್ರೆಸ್ ನ ಘಟಾನುಘಟಿ ನಾಯಕರು ಭಾಗವಹಿಸಿದ್ದಾರೆ.ವೀಕೆಂಡ್ ಕಫ್ರ್ಯೂ ಮಧ್ಯೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಾರಥ್ಯದಲ್ಲಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಾಗಿದ್ದು, ‘ಉಳುವ ಯೋಗಿಯ ನೋಡಲ್ಲಿ’ ಎಂಬ ಗೀತೆ ಮತ್ತು ಪಾದಯಾತ್ರೆ ಆಗಿರುವುದರಿಂದ ಹೆಜ್ಜೆ ಹಾಕುತ್ತೇವೆ ನಾವು ಎಂಬ ಗೀತೆಯನ್ನು ಕಲಾವಿದರು ಹಾಡಿದರು.
“ಕರ್ನಾಟಕ ರಾಜ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ 26 ಅಣೆಕಟ್ಟುಗಳಿವೆ, ಅದರಲ್ಲಿ ಒಂದು ಮೈಸೂರು ಮಹಾರಾಜರು, ಕಟ್ಟಿದ್ದು, 4 ಬ್ರಿಟಿಶರು ಕಟ್ಟಿದ್ದು, ಕಾಂಗ್ರೆಸ್ ಪಕ್ಷ 21 ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದೆ. ಕಾಂಗ್ರೆಸ್ ನಾಡು ನುಡಿಗಾಗಿ ಹೋರಾಡಿದ ಪಕ್ಷವಾಗಿದೆ. ಈಗಲೂ ನಾಡು ನುಡಿಗಾಗಿ ಹೋರಾಡುತ್ತದೆ, ಕಾಂಗ್ರೆಸ್ ಪಕ್ಷದ ನಾಯಕರುಗಳಲ್ಲಿ ರಕ್ತದಲ್ಲಿ ಈ ಹೋರಾಟದ ಗುಣವಿದೆ ದೇಶದಕ್ಕಾಗಿ, ದೇಶದ ಐಕ್ಯತೆಗಾಗಿ ಹೋರಾಟ ಮಾಡುವ ಪಕ್ಷವಾಗಿದೆ. ಸೂರ್ಯನನ್ನು ಉದಯಿಸದಂತೆ ಮಾಡಲು ಸಾಧ್ಯವಿದೆಯೆ, ಗಾಳಿಯನ್ನು ತಡೆಯಲು ಸಾಧ್ಯವೆ, ನಮ್ಮ ಹೋರಾಟ ತಡೆಯಲು ಸಾಧ್ಯವಿಲ್ಲ’ ಎಂದ್ರು.
‘ನಾವು ನೀರಿಗಾಗಿ ಹೋರಾಟ ಮಾಡಿದ್ದೆವೆ, ನೀರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಎಲ್ಲರಿಗೂ ಬೇಕಾಗಿದೆ, ಹಾಗಾಗಿ ಎಲ್ಲರೂ ಸೇರಿ ಪಾದ ಯಾತ್ರೆ ಮಾಡಿದ್ದೇವೆ, ಇದರ ನೇತ್ರತ್ವವನ್ನು ಕಾಂಗ್ರೆಸ್ ವಹಿಸಿದೆ.’ ಎಂದು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಈ ಪಾದಯಾತ್ರೆಯಲ್ಲಿ ಹಸಿರು ಶಾಲು ಕೈಯೆತ್ತಿ ಬೀಡುವ ಮೂಲಕ ರೈತರಿಗಾಗಿ, ನೀರಿಗಾಗಿ ನಮ್ಮ ಹೋರಾಟ ಎಂದು ಸಾರಿದರು. ಕಾಂಗ್ರೆಸ್ ನ ಮಹಿಳಾ ಜನಪ್ರತಿನಿಧಿಗಳು ಭಾಗವಹಿಸಿದ್ದು ಅಲ್ಲದೆ, ಚಿತ್ರರಂಗದ ಕಲಾವಿದರಾದ ಸಾಧು ಕೋಕಿಲಾ, ದುನಿಯಾ ವಿಜಯ್ ಮುಂ ಭಾಗವಹಿಸಿದ್ದರು. ಕೆಲವು ಮಠಾಧೀಶರುಗಳು ಹಾಜರಿದ್ದರ. ಡೊಳ್ಳು ಕುಣಿತ ಮತ್ತು ಇತರ ಕಲಾವಿದರ ಕುಣಿತದೊಂದಿಗೆ ಪಾದಯಾತ್ರೆಯಲ್ಲಿತ್ತು.