ಶ್ರೀನಿವಾಸಪುರ 1 : ಸರ್ಕಾರದ ಆದೇಶ ಮೇರೆಗೆ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರವನ್ನು ಆಯೋಜಿಸಲಾಗಿದ್ದು , ಸಾರ್ವಜನಿಕರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗುಂಡು ಸರ್ಕಾರದ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಶರೀನಾತಾಜ್ ಹೇಳಿದರು.
ರಾಯಲ್ಪಾಡು ಹೋಬಳಿಯ ಚಿಲ್ಲಾರ್ಲಪಲ್ಲಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ಸಮಸ್ಯೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಗ್ರಾಮದಲ್ಲಿನ ಸ್ಮಶಾನವು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ , ಒತ್ತುವರಿದಾರರನ್ನು ಸ್ಥಳಕ್ಕೆ ಕರೆಯಿಸಿ ತಕ್ಷಣವೇ ಒತ್ತವರಿಯನ್ನು ತೆರವುಗೊಳಿಸಿದಕ್ಕೆ ಒತ್ತುವಾರಿದಾರರಿಗೆ ಅಭಿನಂದನೆ ಸಲ್ಲಿಸಿದರು.
ಗುಂಡುತೋಪುಗಳಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನಡೆಲಾಯಿತು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಲು ಇಲಾಖಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ರಸ್ತೆ ಸಮಸ್ಯೆ ಹಾಗು ಗ್ರಾಮಕ್ಕೊಂದು ಗ್ರಂಥಾಲಯ ಬೇಕೆಂಬ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ ಸಂಬಂದಪಟ್ಟ ಇಲಾಖೆಯ ಗಮನಕ್ಕೆ ತಂದು ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಮತದಾರರ ಗುರುತಿನ ಚೀಟಿಗೆ ಆದಾರ ಲಿಂಕ್ ಮಾಡುವ ಪ್ರಕ್ರಿಯೆಯು ಚಾಲನೆಯಲ್ಲಿ ಇದ್ದು, 40% ಆಗಿದ್ದು, ಉಳಿದ 60% ಫಲಾನುಭವಿಗಳು ಅದನ್ನು ಸಂಬಂದ ಪಟ್ಟ ಅಧಿಕಾರಿಗಳ ಮೂಲಕ ಲಿಂಕ್ ಮಾಡಿಸಿಕೊಳ್ಳುವಂತೆ ತಿಳಿಸಿದರು. ರೈತರ ಬೆಳೆ ಸಮೀಕ್ಷೆ 20% ಆಗಿದೆ ಉಳಿದ 80% ಬೆಳೆ ಸಮೀಕ್ಷೆ ಬಾಕಿ ಇದ್ದು, ರೈತರು ಸಂಬಂದಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
17 ರೀತಿಯ ವಿವಿಧ ಪಿಂಚಣಿಗಳು ಇದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ಪೌವತಿ ಖಾತೆ ದಾರರು ಮರಣಪ್ರಮಾಣ ಪತ್ರ ಹಾಗೂ ವಂಶವೃಕ್ಷ ಇತರೆ ದಾಖಲೆಗಳನ್ನು ನೀಡಿದರೆ ಅವುಗಳನ್ನು ಪರಿಶೀಲಿಸಿ 45 ದಿನಗಳಲ್ಲಿ , ಅರ್ಹ ಫಲಾನುಭವಿಗಳಿಗೆ ದಾಖಲೆ ನೀಡಲಾಗುವುದು ಎಂದರು.
ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮು ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ನಿರ್ಮಲಮ್ಮ , ಬಿಇಒ ವಿ.ಉಮಾದೇವಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್, ಪಿಡಬ್ಲೂಡಿ ಹಿರಿಯ ಅಭಯಂತರ ಎಂ.ಕೆ.ಹಸೇನ್ ಸಾಬ್, ಕಿರಿಯ ಅಭಯಂತರ ಗೋವಿಂದಪ್ಪ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ರೇಷ್ಮೆ ಇಲಾಖೆ ಅಧಿಕಾರಿ ಕೃಷ್ಣಪ್ಪ, ಕೃಷಿ ಇಲಾಖೆ ಅಧಿಕಾರಿ ಮಂಜುನಾಥ್, ಶಿರಸ್ತೆದಾರ್ ಬಲರಾಮೇಗೌಡ ಆರ್‍ಐಗಳಾದ ಅಂಬರೀಶ್, ಜನಾರ್ಧನ್, ಮುನಿರೆಡ್ಡಿ, ಗುರುರಾಜರಾವ್, ಗ್ರಾ.ಪಂ ಸದಸ್ಯರು ಮಮತ, ಸೋಮಶೇಖರ್, ಬೈರೆಡ್ಡಿ, ಕಾರ್ಯದರ್ಶಿ ಮಂಜುಳ, ತಹಶೀಲ್ದಾರ್ ಕಚೇರಿ ಎಫ್‍ಡಿಎ ಭಾವನ ಇದ್ದರು.